ಮೈಸೂರು,ಸೆಪ್ಟಂಬರ್,13,2022(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ದಸರಾ ವೇಳೆ ಕೆಲವು ದಿನಗಳಲ್ಲಿ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸೆಪ್ಟೆಂಬರ್ 26 ರಂದು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನ ಪೂಜಾ ಕಾರ್ಯ ನಡೆಯುವ ಹಿನ್ನೆಲೆ ಅಂದು ಬೆಳಿಗ್ಗೆ 10 ರಿಂದ 1.30 ಗಂಟೆ ತನಕ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.
ಅರಮನೆಯಲ್ಲಿ ಅಕ್ಟೋಬರ್ 4 ರಂದು ರಾಜವಂಶಸ್ಥ ಯದುವೀರ್ ಅವರಿಂದ ಆಯುಧ ಪೂಜಾ ಕಾರ್ಯಕ್ರಮ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅ.4 ರಂದು ಬೆಳಿಗ್ಗೆ 10 ರಿಂದ 1.30 ಗಂಟೆವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
ಅ. 5 ರಂದು ಅರಮನೆಯಲ್ಲಿ ಯದುವೀರ್ ರಿಂದ ವಿಜಯದಶಮಿಯ ಪೂಜಾ ಕೈಂಕರ್ಯ ನಡೆಯಲಿದ್ದು ಇಡೀ ದಿನ ಮೈಸೂರು ಅರಮನೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅಂತಿಮವಾಗಿ ಅಕ್ಟೋಬರ್ 20 ರಂದು ಸಿಂಹಾಸನ ವಿಸರ್ಜನೆ ನಡೆಯಲಿದ್ದು ಅಂದು ಮೈಸೂರು ಅರಮನೆಗೆ ಬೆಳಿಗ್ಗೆ 10 ರಿಂದ 1.30 ಗಂಟೆ ತನಕ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಿ ಮೈಸೂರು ಅರಮನೆ ಮಂಡಳಿ ಆದೇಶ ಹೊರಡಿಸಿದೆ.
Key words: dasara –festival-Mysore -Palace – Public
ENGLISH SUMMARY…
Dasara Mahotsav: Entry for public to Ambavilasa palace restricted on these days
Mysuru, September 13, 2022 (www.justkannada.in): The countdown for the world-renowned Mysuru Dasara has commenced. In the meanwhile, entry for public to the historic Ambavilasa palace is restricted on the following days.
The Private Durbar will be held in the Mysuru palace on September 26. As special pujas will be held, entry to the palace for public will be restricted from 10.00 am to 1.30 pm.
The Ayudha puja program will be held inside the palace premises on October 4 by the scion of Wadiyar family Yaduveer Wadiyar. Hence, entry to the public will be restricted from 10 am to 1.30 pm.
On October 5, Vijayadashami programs will be held in the palace. Entry to public will be restricted the entire day. On October 20 dismantling of the throne will be done, and entry to the public will be restricted from 10.00 am to 1.30 pm, according to a press statement issued by the Palace authorities.
Keywords: Mysuru Dasara Mahotsav/ Entry/ public/ restricted