ಮೈಸೂರು,ಅಕ್ಟೋಬರ್,26,2020(www.justkannada.in) : ದಸರಾ ಜಂಬೂಸವಾರಿ ಹಿನ್ನಲೆ ಗಜಪಡೆಗೆ ವಿಶೇಷ ಅಲಂಕಾರಕ್ಕೆ ಸಿದ್ದತೆ. ಗಜಪಡೆಗೆ ಹಣ್ಣೆ ಪಟ್ಟಿ, ಆಭರಣ, ಕಾಲಿನ ಗೆಜ್ಜೆ, ಕೊರಳಿನ ಗಂಟೆ. ಇತರೆ ಆಭರಣದ ಪರಿಕರಣಗಳ ಸಿದ್ದತೆ.ನಾಡಹಬ್ಬ ದಸರಾ ಮಹೋತ್ಸವ ಜಂಬೂಸವಾರಿ ಮೆರವಣಿಗೆ ಕ್ಷಣಗಣನೆ ಆರಂಭವಾಗಿದ್ದು, ಗಜಪಡೆಯ ಅಂದ ಹೆಚ್ಚಿಸೋ ಆಭರಣಗಳು ತೊಡಿಸುವ ಮೂಲಕ ಗಜಪಡೆಗೆ ವಿಶೇಷ ಅಲಂಕಾರಕ್ಕೆ ಸಿದ್ದತೆ ಮಾಡಲಾಗುತ್ತಿದೆ.
ವಿಶೇಷ ಆಭರಣದ ಮೂಲಕ ಗಜಪಡೆಗೆ ಅಲಂಕಾರ
ವಿಶೇಷ ಆಭರಣದ ಮೂಲಕ ಗಜಪಡೆಗೆ ಅಲಂಕಾರ. ಜಂಬೂ ಸವಾರಿ ಸಾಗೋ ಒಂದು ಗಂಟೆ ಮುನ್ನ ಆಭರಣದ ಅಲಂಕಾರ. ಸಕಲ ಸಿದ್ದತೆ ಮಾಡಿಕೊಡಿರೋ ಅರಣ್ಯ ಇಲಾಖೆ. ಮೈಸೂರಿನ ಅರಮನೆ ಆವರಣದಲ್ಲೇ ಆಭರಣಗಳ ಸಿದ್ದತೆ.
ಜಂಬೂಸವಾರಿ ವೇಳೆ ಈ ಸ್ಪೆಷಲ್ ಫುಡ್
ಗಜಪಡೆಗೆ ಧಣಿವಾಗದಂತೆ ಸ್ಪೆಷಲ್ ಫುಡ್. ಜಂಬೂಸವಾರಿ ವೇಳೆ ಈ ಸ್ಪೆಷಲ್ ಫುಡ್ ಬಳಕೆ ಮಾಡಲಾಗುತ್ತಿದೆ. ಹಸಿ ಹುಲ್ಲಿನ ಕುಸೆರೆಗೆ ಅವಲಕ್ಕಿ, ಬೆಲ್ಲ, ಕಾಯಿ, ಗ್ಲುಕೋಸ್, ಧಾನ್ಯಗಳ ಬಳಕೆ. ಜಂಬೂಸವಾರಿ ಸಾಗುವ ವೇಳೆ ಗಜಪಡೆಗೆ ಈ ಕುಸುರೆ ನೀಡಲಾಗುತ್ತದೆ. ದಣಿವಾಗದಂತೆ ಮಾಡಲು ಅರಣ್ಯ ಇಲಾಖೆ ಈ ಕ್ರಮವಹಿಸಿದೆ.
key words : Dasara-Gajadee-prepared-special-decoration-Special-food- jamboswari