ಮೈಸೂರು,ಸೆಪ್ಟಂಬರ್,11,2020(www.justkannada.in): ಕೊರೋನಾ ಹಿನ್ನೆಲೆ ಸರಳ ಸಾಂಪ್ರದಾಯಕ ದಸರಾ ಮತ್ತು ಜಂಬೂ ಸವಾರಿ ಅರಮನೆಯೊಳಗೆ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ಅರ್ಜುನ ಆನೆ 60 ವರ್ಷ ಪೂರೈಸಿರುವ ಹಿನ್ನೆಲೆ ಈ ಬಾರಿ ಅಭಿಮನ್ಯು ಅಂಬಾರಿ ಹೊರುವುದು ಬಹುತೇಕ ಖಚಿತವಾಗಿದೆ.
60 ವರ್ಷ ಪೂರೈಸಿದ ಆನೆಗಳಿಗೆ ಯಾವುದೇ ಭಾರ ಹೊರಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶವಿದ್ದು ಈ ಹಿನ್ನೆಲೆ ಈ ಬಾರಿ ಅರ್ಜುನನ ಬದಲು ಅಭಿಮನ್ಯು ಅಂಬಾರಿ ಹೊರುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಸರ್ಕಾರಕ್ಕೆ ಕಳುಹಿರುವ ಪಟ್ಟಿಯಲ್ಲಿ ಅಭಿಮನ್ಯು ಹೆಸರನ್ನ ಅರಣ್ಯ ಇಲಾಖೆ ಸೂಚಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ ಸಿ ಅಲೆಗ್ಸಾಂಡರ್, ಅರ್ಜುನನಿಗೆ ಅಂಬಾರಿ ವಿಚಾರ ಎಲ್ಲಕ್ಕಿಂತ ಕಾನೂನು ಮುಖ್ಯ. ನಾವು ಕಾನೂನು ಪಾಲಿಸಬೇಕು. ಈ ಹಿನ್ನೆಲೆಯಲ್ಲಿ ಅಭಿಮನ್ಯು ಹೆಸರು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಕೊನೆ ಕ್ಷಣದಲ್ಲಿ ಬದಲಾವಣೆ ಆಗಲೂಬಹುದು. ಅಂಬಾರಿ ಹೊರಲು ಆನೆಯ ಅವಶ್ಯಕತೆ ಇದೆ . ಅರ್ಜುನ ಆನೆಯೇ ಆಗಬೇಕು ಅಂತಾ ಏನೂ ಇಲ್ಲ. ಸರ್ಕಾರದ ನಿರ್ಧಾರ ನಂತರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಎಂ ಸಿ ಅಲೆಗ್ಸಾಂಡರ್ ತಿಳಿಸಿದ್ದಾರೆ.
Key words: Dasara –Mysore- Abhimanyu –almost- sure – Ambari.