DASARA POLICE BAND: ಅರಮನೆ ಆವರಣದಲ್ಲಿ ಜಮಾಯಿಸಿದ ಸಹಸ್ರಾರು ಜನ.

Police Band: Thousands of people gathered in the palace premises.

 

ಮೈಸೂರು, ಅ.08,2024: (www.justkannada.in news) ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ. ಅರಮನೆ ಮುಂಭಾಗದಲ್ಲಿ ಪೋಲಿಸ್ ಬ್ಯಾಂಡ್ ವಾದ್ಯ ಮೇಳ. ಮೇಳೈಸಿದ ಕರ್ನಾಟಕ ರಾಜ್ಯ ಪೋಲಿಸ್ ಸಮೂಹ ವಾದ್ಯಮೇಳ.

ಜಗಮಗಿಸುವ ದೀಪಾಲಂಕಾಗಳ ನಡುವೆ ಅದ್ದೂರಿಯಾಗಿ ಜರುಗಿದ ಪೋಲಿಸ್ ಬ್ಯಾಂಡ್ ಮ್ಯೂಸಿಕ್. ಸುಮಾರು ಒಂದುವರೆ ಶತಮಾನಗಳ ಇತಿಹಾಸವಿರುವ ಪೋಲಿಸ್ ಬ್ಯಾಂಡ್.

1868 ರಲ್ಲಿ ಮೈಸೂರು ಮಹಾರಾಜರು ಆರಂಭಿಸಿದ ಸಮೂಹ ವಾದ್ಯ ಮೇಳ. 1918 ರಲ್ಲಿ ನಾಲ್ವಡಿ ಅವರ ಆಳ್ವಿಕೆ ಕಾಲದಲ್ಲಿ ಮೈಸೂರು ಬ್ಯಾಂಡ್ ಎಂದು ಪ್ರಸಿದ್ದ. 1951 ರಿಂದ ಪೋಲೀಸ್ ಇಲಾಖೆ  ವತಿಯಿಂದ ನಡೆಯುತ್ತಿರುವ ಪೋಲಿಸ್ ಬ್ಯಾಂಡ್. ಪೋಲಿಸ್ ಸಮೂಹ ವಾದ್ಯ ಮೇಳ  ಆಲಿಸಲು ಅರಮನೆ ಆವರಣದಲ್ಲಿ ಜಮಾಯಿಸಿದ ಸಹಸ್ರಾರು ಜನ.

ಪೋಲಿಸ್ ಬ್ಯಾಂಡ್ ನಲ್ಲಿ ಗೃಹ ಸಚಿವ  ಜಿ ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಸೇರಿದಂತೆ ಸ್ಥಳೀಯ ಶಾಸಕರು ಭಾಗಿ.

ನೆರೆದಿದ್ದ ಸಹಸ್ರಾರು ಜನರನ್ನ ಮಂತ್ರ ಮುಗ್ಧರನ್ನಾಗಿಸಿದ ಬ್ಯಾಂಡ್. ವಂದೇ ಮಾತರಂ, ಮೇರೆ ವತನ್ ಕೇ ಲೋಗೋ ಎಂಬ ಗೀತೆ ಮೂಲಕ ಸಮೂಹ ವಾದ್ಯ ಮೇಳ ಆರಂಭ. ಪೋಲಿಸ್ ಬ್ಯಾಂಡ್ ನಲ್ಲಿ ನೂರಾರು ನುರಿತ ಸಂಗೀತಗಾರರು ಭಾಗಿ. ದೇಶ ಭಕ್ತಿ ಗೀತೆಗಳಿಗೆ ಸುಶ್ರಾವ್ಯವಾಗಿ ಬ್ಯಾಂಡ್ ನುಡಿಸಿದ ಪೋಲೀಸರು. ಸಮೂಹ ವಾದ್ಯ ಮೇಳದಲ್ಲಿ ಸುಮಾರು 150 ಕ್ಕೂ ಹೆಚ್ಚು ಮಂದಿ ಭಾಗಿ. ವಾದ್ಯ ಮೇಳ ಕಣ್ತುಂಬಿಕೊಳ್ಳ ನೆರೆದಿದ್ದ ಸಹಸ್ರಾರು ಜನ.

key word: Dasara, Police Band, Thousands of people, gathered, Mysore palace, premises.

Police Band: Thousands of people gathered in the palace premises.