ಮೈಸೂರು,ಸೆ,27,2019(www.justkannada.in): ದಸರಾ ಪೋಸ್ಟರ್ ಗಳಲ್ಲಿ ಆಂಗ್ಲ ಭಾಷೆಯೇ ರಾರಾಜಿಸುತ್ತಿದ್ದು ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ಮೈಸೂರಿನ ಅಗ್ರಹಾರ ವೃತ್ತದಲ್ಲಿ ಜಮಾಯಿಸಿದ ನಡೆದ ಮೈಸೂರು ಕನ್ನಡ ವೇದಿಕೆ ಸದಸ್ಯರು ದಸರಾ ಪೋಸ್ಟರ್ ಗಳಲ್ಲಿ ಅಂಗ್ಲಭಾಷೆ ಬಳಕೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಉಸ್ತುವಾರಿ ಸಚಿವರು ಕನ್ನಡವನ್ನು ಕಡೆಗಣಿಸುತ್ತಿದ್ದಾರೆ. ದಸರಾ ಪೋಸ್ಟರ್ ಗಳಲ್ಲಿ ಆಂಗ್ಲ ಭಾಷೆ ರಾರಾಜಿಸುತ್ತಿದೆ. ಪೋಸ್ಟರ್ ಗಳಲ್ಲಿ ಆಂಗ್ಲ ಭಾಷೆಯನ್ನು ಮೊದಲ ಭಾಷೆಯನ್ನಾಗಿ ಬಳಸಲಾಗಿದೆ. ಯುವ ದಸರಾ, ದಸರಾ ಪೆಟ್ ಶೋ, ಮತ್ತು ವಸ್ತುಪ್ರದರ್ಶನದ ಪೋಸ್ಟರ್ ಗಳಲ್ಲಿ ಆಂಗ್ಲಭಾಷೆಯನ್ನು ಬಳಸಲಾಗಿದೆ. ಆ ಮೂಲಕ ಉಸ್ತುವಾರಿ ಸಚಿವರಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಅಧಿಕಾರಿಗಳು ಕೂಡಲೆ ಎಚ್ಚೆತ್ತು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಪ್ರತಿಭಟನೆ ವೇಳೆ ಸಂಘದ ಕಾರ್ಯಕರ್ತರು ಒತ್ತಾಯಿಸಿದರು.
Key words: Dasara -posters -use-english-Kannada –protest- mysore