ಮೈಸೂರು:ಆ-4:(www.justkannada.in) ವಿಶ್ವ ವಿಖ್ಯಾತ ಮೈಸೂರು ದಸರಾಗೆ ಎರಡ ತಿಂಗಳು ಕೂಡ ಇಲ್ಲ. ಆದರೆ ವಿಶ್ವಪ್ರಸಿದ್ಧ ಐತಿಹಾಸಿಕ ಕಾರ್ಯಕ್ರಮಕ್ಕೆ ಇನ್ನೂ ಯಾವುದೇ ಸಿದ್ಧತೆಗಳು ಕೂಡ ನಡೆಯುತ್ತಿಲ್ಲ. ಸೆಪ್ಟೆಂಬರ್ 29 ರಿಂದ 10 ದಿನಗಳ ದಸರಾ ಉತ್ಸವ ಪ್ರಾರಂಭವಾಗಲಿದ್ದು, ಜಿಲ್ಲಾ ಅಧಿಕಾರಿಗಳು ಇನ್ನೂ ಪೂರ್ವಸಿದ್ಧತಾ ಸಭೆ ನಡೆಸಿಲ್ಲ.
ಹಿಂದೆ, ದಸರಾ ಹೈ ಪವರ್ ಕಮಿಟಿ ಸಭೆ ದಸರಾಕ್ಕೆ ಮೂರು ತಿಂಗಳ ಮೊದಲು ನಡೆಯುತ್ತಿತ್ತು, ಹೀಗಾಗಿ ಭವ್ಯ ಉತ್ಸವಕ್ಕೆ ಚಾಲನೆುತ್ತಿತ್ತು. ಈ ವರ್ಷ, ಹಿಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜುಲೈ ಮೊದಲ ವಾರದಲ್ಲಿ ಉನ್ನತ ಅಧಿಕಾರ ಸಮಿತಿ ಸಭೆ ನಡೆಸುವ ಭರವಸೆ ನೀಡಿದ್ದರು, ಆದರೆ ಹಠಾತ್ ರಾಜಕೀಯ ಬೆಳವಣಿಗೆಗಳಿಂದಾಗಿ ಸಭೆ ನಡೆಯಲಿಲ್ಲ.
ಆದರೆ, ಮೈಸೂರು ಡಿಸಿ ಅಭಿರಾಮ್ ಜಿ.ಶಂಕರ್ ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಡಬೇಕಾದ ಸಿದ್ಧತೆಗಳ ಕುರಿತು ಮಾಹಿತಿ ಪಡೆದು, ಸಂಭ್ರಮಾಚರಣೆಯ ಕುರಿತು ಪ್ರಸ್ತಾವನೆಯನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವಾಗಲೇ ಜೆಡಿ (ಎಸ್) -ಕಾಂಗ್ರೆಸ್ ಒಕ್ಕೂಟದ ಮೈತ್ರಿ ಸರ್ಕಾರ ಪತನಗೊಂಡು. ಈಗ ಬಿ.ಎಸ್. ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ದಸರಾ ಸಮಿತಿ ಶೀಘ್ರದಲ್ಲೇ ಸಭೆ ಸೇರುತ್ತದೆ ಎಂದು ಅಧಿಕಾರಿಗಳು ಆಶಿಸುತ್ತಿದ್ದಾರೆ.
ದಸರಾ ಸಿದ್ಧತೆ ವಿಳಂಬವಾಗುತ್ತಿರುವ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ಎಂಸಿಸಿ ಆಯುಕ್ತರಾಗಿರುವ ಶಿಲ್ಪಾ ನಾಗ್ ಅವರು ಚೈಲ್ಡ್ ಕೇರ್ ರಜೆಯಲ್ಲಿರುವುದು ಹಾಗೂ ಜಿಲ್ಲಾಧಿಕಾರಿಗಳು ಬರ ನಿರ್ವಹಣೆ, ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ಇತರ ಕಾರ್ಯಗಳತ್ತ ತಲ್ಲೀನರಾಗಿರುವುದು ಕೂಡ ದಸರಾ ಸಿದ್ಧತೆಗಳು ವಿಳಂಬವಾಗಲು ಕಾರಣವಾಗಿದೆ ಎನ್ನುತ್ತಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಯರ್ ಪುಷ್ಪಲತಾ ಜಗನ್ನಾಥ್, ಕಳೆದ ತಿಂಗಳು ನಡೆದ ಹಠಾತ್ ರಾಜಕೀಯ ಬೆಳವಣಿಗೆಗಳಿಂದಾಗಿ ದಾಸರಾ ಸಿದ್ಧತೆಗಳಿಗೆ ಹಿನ್ನಡೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಈಗ ಮುಡಾ ಆಯುಕ್ತರಾಗಿರುವ ಪಿ.ಎಸ್. ಕಾಂತರಾಜ್, ಎಂಸಿಸಿ ಆಯುಕ್ತರಾಗಿಯೂ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡ ಹಿನ್ನಲೆಯಲ್ಲಿ ಹಬ್ಬದ ಸಿದ್ಧತೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಹೇಳಿದ್ದಾರೆ.
ಈ ನಡುವೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ದಸರಾ ತಯಾರಿಗೆ ಸಂಬಂಧಿಸಿದಂತೆ ದಸರಾ ಹೈ ಪವರ್ ಕಮಿಟಿ ಸಭೆ ಕರೆಯಲು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈಗಲಾದರೂ ನಾಡ ಹಬ್ಬ ದಸರಾ ಸಿದ್ಧತೆಗೆ ಚಾಲನೆ ದೊರೆಯುವ ನಿರೀಕ್ಷಿಯಿದೆ.