ಮೈಸೂರು,ಅಕ್ಟೋಬರ್,10,2020(www.justkannada.in): ಈ ಬಾರಿ ಟೆಕ್ನಿಕಲ್ ಕಮಿಟಿ ವರದಿಯಂತೆ ಮೈಸೂರು ದಸರಾ ಆಚರಣೆ ಮಾಡಲಾಗುತ್ತದೆ. ದಸರಾದ ಎಲ್ಲಾ ಕಾರ್ಯಕ್ರಮ ವರ್ಚುವಲ್ ಆಗಿರಲಿದೆ. ಉದ್ಘಾಟನೆ, ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ನೇರ ಪ್ರಸಾರ ಆಗಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಟಕ್ನಿಕಲ್ ಕಮಿಟಿ ವರದಿಯಂತೆ ದಸರಾ ಮಾಡ್ತಿವಿ. ಟೆಕ್ನಿಕಲ್ ಕಮಿಟಿ ನೀಡಿರುವ ವರದಿಯಂತೆ ದಸರಾ ಸಿದ್ದತೆ ಮಾಡುತ್ತೇವೆ. ಉದ್ಘಾಟನಾ ಕಾರ್ಯಕ್ರಮಕ್ಕೆ 200 ಮಂದಿ, ಜಂಬೂಸವಾರಿಗೆ 300 ಮಂದಿಗೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಮಂದಿಗೆ ಅವಕಾಶ ನೀಡಿದ್ದಾರೆ. ನಾವು ಇಷ್ಟೇ ಜನಕ್ಕೆ ಅವಕಾಶ ಮಾಡಿಕೊಡುತ್ತೇವೆ. ಟೆಕ್ನಿಕಲ್ ಕಮಿಟಿ ಅವರ ಸಲಹೆ ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡುವುದಿಲ್ಲ ಎಂದು ತಿಳಿಸಿದರು
ಮಾಧ್ಯಮದವರು 350 ಮಂದಿ ಇದ್ದಾರೆ ಅವರಿಗೆ 50 ಮಂದಿಗೆ ಅವಕಾಶ ಕೊಡ್ತಿವಿ. ಜನಪ್ರತಿನಿಧಿಗಳು 50 ಮಂದಿ ಇದ್ದಾರೆ ಅವರನ್ನ 25ಕ್ಕೆ ಇಳಿಸುತ್ತೇವೆ. ಪೊಲೀಸರು 100 ಮಂದಿ ಇದ್ದಾರೆ ಅದನ್ನು ಅರ್ಧಕ್ಕೆ ಇಳಿಸುತ್ತೇವೆ. ಬೆಟ್ಟದಲ್ಲಿ 200 ಮಂದಿಯ ಒಳಗೆ ಕಾರ್ಯಕ್ರಮ ಮಾಡ್ತಿವಿ. ಹಾಗೆಯೇ ನಗರದಲ್ಲಿ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇರೋದಿಲ್ಲ. ಜನ ಗುಂಪು ಸೇರಬಾರದು. ಎಲ್ಲಿಯೂ ಬಹಿರಂಗವಾಗಿ ಕಾರ್ಯಕ್ರಮ ನಡೆಸಬಾರದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಉದ್ಘಾಟನೆ, ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ನೇರ ಪ್ರಸಾರ
ಈ ಬಾರಿ ದಸರಾದ ಎಲ್ಲ ಕಾರ್ಯಕ್ರಮ ವರ್ಚುವಲ್ ಆಗಿರಲಿದೆ. ಉದ್ಘಾಟನೆ, ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ನೇರ ಪ್ರಸಾರ ಆಗಲಿದೆ. ಎಲ್ಲಿಯೂ ಜನ ಸೇರುವಂತಿಲ್ಲ. ದೀಪಾಲಂಕಾರ ಬಗ್ಗೆ ಹೆಚ್ಚು ಜನ ಸೇರದಂತೆ ಕ್ರಮಕೈಗೊಳ್ಳುತ್ತೇವೆ. ಕೇವಲ 2 ಗಂಟೆ ಮಾತ್ರ ದೀಪಾಲಂಕಾರ ಇರಲಿದೆ. ಹೈಪವರ್ ಕಮಿಟಿಯಲ್ಲಿನ ನಿರ್ಧಾರದಂತೆ ದೀಪಾಲಂಕಾರ ಮಾಡ್ತಿದ್ದೇವೆ ಎಂದರು.
ಕೇರದ ಓಣಂ ಹಬ್ಬದ ಘಟನೆ ಉದಾಹರಣೆ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಕೇರಳವೇ ದಸರಾನೆ ಬೇರೆ. ಅಲ್ಲಿನ ಪರಿಸ್ಥಿತಿಗೂ ಇದಕ್ಕು ಸಂಬಂಧ ಇಲ್ಲ. ಆದರೂ ಟೆಕ್ನಿಕಲ್ ಸಲಹೆಯಂತೆ ದಸರಾ ಮಾಡ್ತಿವಿ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ದಸರಾ ಬಜೆಟ್ ಬಗ್ಗೆ ಪ್ಲಾನಿಂಗ್ ಆಗಿಲ್ಲ…
ಈ ಬಾರಿ ದಸರಾಗೆ ಒಂದೆ ಒಂದು ರೂಪಾಯಿ ಖರ್ಚು ಮಾಡಿಲ್ಲ. ಇನ್ನು ದಸರಾ ಬಜೆಟ್ ಬಗ್ಗೆ ಪ್ಲಾನಿಂಗ್ ಆಗಿಲ್ಲ. ಟೆಕ್ನಿಕಲ್ ಕಮಿಟಿ ವರದಿ ಕೊಟ್ಟಿದೆ. ಅದರ ಸೂಚನೆಯಂತೆ ಕಾರ್ಯಕ್ರಮ ರೂಪಿಸುತ್ತೇವೆ. ಆ ಕಾರ್ಯಕ್ರಮಗಳಿಗೆ ಎಷ್ಟು ಹಣ ಬೇಕು ಅಂತ ಈಗ ತೀರ್ಮಾನ ಮಾಡ್ತಿವಿ. ಕಳೆದ ಬಾರಿಯ ಹಣ ಬಾಕಿ ಇದೆ. ಸರ್ಕಾರಕ್ಕೆ ಹಣಕಾಸು ಇಲಾಖೆಗೆ ಮನವಿ ಮಾಡಿದ್ದೇವೆ. ಶೀಘ್ರದಲ್ಲೆ ಆ ಹಣವನ್ನು ತಂದು ಬಾಕಿ ಇರುವ ಬಿಲ್ ಪಾವತಿಸುತ್ತೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
Key words: Dasara – Technical Committee report-Only -200 people – allowed – inaugural -Minister -ST Somashekhar.