ಮೈಸೂರು,ಫೆಬ್ರವರಿ,15,2021(www.justkannada.in): ಫೆಬ್ರವರಿ 24 ರಂದು ಮೈಸೂರು ಮೇಯರ್ ಚುನಾವಣೆ ಫಿಕ್ಸ್ ಆಗಿದೆ. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ 100 ಕ್ಕೆ 200% ರಷ್ಟು ಪಕ್ಕಾ ಎಂದು ಬಿಜೆಪಿ ಶಾಸಕ ಎಲ್. ನಾಗೇಂದ್ರ ಸ್ಪಷ್ಟನೆ ನೀಡಿದರು.
ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಲ್ ನಾಗೇಂದ್ರ, ಈಗಾಗಲೇ ಜೆಡಿಎಸ್ ಜೊತೆ ಒಂದು ಹಂತದ ಮಾತುಕತೆ ಆಗಿದೆ. ರಾಜ್ಯ ಮಟ್ಟದಲ್ಲೂ ನಮ್ಮ ನಾಯಕರು ಈಗಾಗಲೇ ಜೆಡಿಎಸ್ ಜೊತೆ ಮಾತುಕತೆ ನಡೆಸಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರು ಈ ಬಗ್ಗೆ ಜೆಡಿಎಸ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬಾರಿ ಪಾಲಿಕೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಶತಸಿದ್ದ ಎಂದರು.
ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಯುತ್ತೆ ತನ್ವೀರ್ ಸೇಠ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಲ್. ನಾಗೇಂದ್ರ, ಅವರಿಗಿರೋ ಮಾಹಿತಿ ಪ್ರಕಾರ ಅವರು ಮಾತನಾಡುತ್ತಾರೆ. ನನಗಿರೋ ಮಾಹಿತಿ ಪ್ರಕಾರ ನಾನು ಹೇಳುತ್ತಿದ್ದೇನೆ. ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಕಾ ಎಂದರು.
ಐತಿಹಾಸಿಕ ಕಟ್ಟಡಗಳು ಶಿಥೀಲ ವಿಚಾರ: ಕಲಾಪದಲ್ಲಿ ಧ್ವನಿ ಎತ್ತಿದ್ದೇನೆ.
ಐತಿಹಾಸಿಕ ಕಟ್ಟಡಗಳು ಶಿಥೀಲಗೊಂಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಲ್. ನಾಗೇಂದ್ರ, ಈಗಾಗಲೇ ಈ ಬಗ್ಗೆ ಕಲಾಪದಲ್ಲಿ ಧ್ವನಿ ಎತ್ತಿದ್ದೇನೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ. ಫೈರ್ ಬ್ರಿಗೇಡ್ ಸೇರಿದಂತೆ ಹಲವ ಐತಿಹಾಸಿಕ ಕಟ್ಟಡಗಳ ವಿಚಾರವಾಗಿ ಅಧಿಕಾರಿಗಳ ಸಭೆ ಮಾಡಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡ್ತೇನೆ ಎಂದರು.
ಮಹಾರಾಜ ಕಾಲೇಜು ಛಾವಣಿ ಕುಸಿದ ವಿಚಾರ, ಈ ಬಗ್ಗೆ ಕುಲಪತಿಗಳ ಜೊತೆ ಮಾತನಾಡಿದ್ದೇನೆ. ಸಮಸ್ಯೆ ಸರಿಪಡಿಸುವ ವಿಚಾರವಾಗಿಯೂ ಚರ್ಚೆಯಾಗಿದೆ. ಆದಷ್ಟು ಬೇಗ ದುರಸ್ತಿ ಕಾರ್ಯ ಮಾಡಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದರು.
Date announced for Mayor election: MLA L. Nagendra clarifies on coalition between JDS & BJP
Mysuru, Feb. 15, 2021 (www.justkannada.in): The Mayoral elections in Mysuru have been fixed. BJP MLA L. Nagendra has clarified that the coalition between JDS & BJP is 200% definite.
Speaking to the media persons today he said, “one round of discussions has been held already with JDS. Our party State President has also held discussions regarding this even at the state-level.
Keywords: MLA L. Nagendra/ BJP/ Mysuru Mayoral elections/ Coalition between JDS & BJP 100%
Key words: Date fix –mayor-election- MLA –L.Nagendra