ಮೈಸೂರು,ಆ,16,2019(www.justkananda.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ನಡುವೆ ದಸರಾ ಗಜಪಯಣಕ್ಕೆ ದಿನಾಂಕ ಫಿಕ್ಸ್ ಆಗಿದೆ.
ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಸ್ಟ್ 22ಕ್ಕೆ ದಸರಾ ಗಜಪಡೆ ನಾಡಿನತ್ತ ಹೆಜ್ಜೆಯಿಡಲಿವೆ. ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಯಿಂದ ಮೈಸೂರು ಅರಮನೆಗೆ ದಸರಾ ಗಜಪಡೆಯ ಆನೆಗಳು ಬರಲಿವೆ. ಆಗಸ್ಟ್ 22ರ ಬೆ.10.30ಕ್ಕೆ ಗಜಪಯಣಕ್ಕೆ ಚಾಲನೆ ಸಿಗಲಿದ್ದು, ದಸರಾ ಗಜಪಡೆಯ ಮೊದಲ ತಂಡದ ಗಜಪಯಣದಲ್ಲಿ ಭಾಗಿಯಾಗಲಿದೆ. ಆರು ಆನೆಗಳು ಗಜಪಯಣದ ಮೂಲಕ ಅರಮನೆಗೆ ಬರಲಿವೆ.
ಅಂಬಾರಿ ಸಾರಥಿ ಅರ್ಜುನ ನೇತೃತ್ವದ ಆರು ಆನೆಗಳಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಗಜಪಯಣದ ಮೂಲಕ ಮೈಸೂರು ದಸರಾ ಸಿದ್ದತೆಗಳು ಆರಂಭವಾಗಲಿವೆ.
ಮೈಸೂರು ದಸರಾಗೆ ಗಜಪಡೆ ಲಿಸ್ಟ್ ಫೈನಲ್…
ಮೈಸೂರು ದಸರಾಗೆ ಗಜಪಡೆ ಲಿಸ್ಟ್ ಫೈನಲ್ ಆಗಿದ್ದು, ಈ ಬಾರಿ ದಸರಾದಲ್ಲಿ 14 ಆನೆಗಳು ಭಾಗಿಯಾಗಲಿವೆ. ಎರಡು ತಂಡಗಳಾಗಿ ಮೈಸೂರಿಗೆ ಗಜಪಡೆಗಳು ಆಗಮಿಸಲಿದ್ದು ಮೊದಲ ತಂಡದಲ್ಲಿ 6 ಆನೆಗಳು, ಎರಡನೇ ತಂಡದಲ್ಲಿ 8 ಆನೆಗಳು ಹೆಜ್ಜೆ ಹಾಕಲಿವೆ ಎರಡು ಆನೆಗಳು ಹೆಚ್ಚುವರಿಯಾಗಿ ದಸರಾದಲ್ಲಿ ಭಾಗಿಯಾಗಲಿವೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡನೇ ತಂಡದ ಆನೆಗಳು ಮೈಸೂರಿಗೆ ಆಗಮಿಸಲಿವೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಪಟ್ಟಿ ಇಲ್ಲಿದೆ ನೋಡಿ…
1, ಅರ್ಜುನ- 59 ವರ್ಷ- ಬಳ್ಳೆ ಆನೆ ಶಿಬಿರ..
- ಬಲರಾಮ – 61 ವರ್ಷ – ಮತ್ತಿಗೋಡು ಆನೆ ಶಿಬಿರ..
- ಅಭಿಮನ್ಯು – 53 ವರ್ಷ ಮತ್ತಿಗೋಡು ಆನೆ ಶಿಬಿರ..
- ವರಲಕ್ಷೀ – 63 ವರ್ಷ – ಮತ್ತಿಗೋಡು ಆನೆ ಶಿಬಿರ..
- ಕಾವೇರಿ – 41 ವರ್ಷ – ದುಬಾರೆ ಆನೆ ಶಿಬಿರ..
- ವಿಜಯ – 62 ವರ್ಷ – ದುಬಾರೆ ಆನೆ ಶಿಬಿರ..
- ವಿಕ್ರಮ – 46 ವರ್ಷ – ದುಬಾರೆ ಆನೆ ಶಿಬಿರ..
- ಗೋಪಿ – 37 ವರ್ಷ – ದುಬಾರೆ ಆನೆ ಶಿಬಿರ..
- ಧನಂಜಯ – 36 ವರ್ಷ – ದುಬಾರೆ ಆನೆ ಶಿಬಿರ..
- ಈಶ್ವರ – 49 ವರ್ಷ – ದುಬಾರೆ ಆನೆ ಶಿಬಿರ..
- ದುರ್ಗಾಪರಮೇಶ್ವರಿ – 52 ವರ್ಷ – ಕೆ.ಗುಡಿ ಆನೆ ಶಿಬಿರ..
- ಜಯಪ್ರಕಾಶ್ – 57 ವರ್ಷ – ರಾಂಪುರ ಆನೆ ಶಿಬಿರ..
ಹೆಚ್ಚುವರಿಯಾಗಿ ಎರಡು ಆನೆಗಳ ಆಗಮನ..
- ಲಕ್ಷೀ – 17 ವರ್ಷ – ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ..
- ರೋಹಿತ್ – 19 ವರ್ಷ – ಬಂಡಿಪುರ ಹುಲಿ ಸಂರಕ್ಷಕ ಅರಣ್ಯ..
Key words: Date fix –mysore Dasara -Gajapayana