ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ದಿನಾಂಕ ಫಿಕ್ಸ್.

ಬೆಂಗಳೂರು,ಜೂನ್,28,2021(www.justkannada.in): ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿದೆ. ಜುಲೈ 19 ಮತ್ತು 22 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.jk

ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂಧ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಜುಲೈ 19 ರಂದು ಕೋರ್ ಸಬ್ಜೆಕ್ಟ್ ಪರೀಕ್ಷೆಗಳು ನಡೆಯುತ್ತವೆ.  ಜುಲೈ 22 ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10.30ರಿಂದ 1.30ರವರೆಗೆ ಪರೀಕ್ಷೆ ನಡೆಯುತ್ತದೆ. ಜೂನ್ 30 ರಂದು ಪ್ರವೇಶ ಪತ್ರ ನೀಡುತ್ತೇವೆ ಎಂದು ತಿಳಿಸಿದರು.

ಈ ಬಾರಿ 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.  ಈಗಾಗಲೇ ಪರೀಕ್ಷೆ ನಡೆಸುವ ಸಂಬಂಧ ಆರೋಗ್ಯ ಇಲಾಖೆ ಎಸ್ ಒಪಿ ನೀಡಿದೆ.  ಮಾರ್ಗಸೂಚಿ ಸಂಬಂಧ ಡಿಸಿಗಳು ಸಿಇಓ ಖಜಾನೆ ಅದಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ.  ಈ ಬಾರಿ 2 ದಿನ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ.  ಗಣಿತ, ವಿಜ್ಞಾನ, ಸಮಾಜವಿಜ್ಞಾನ ಪರೀಕ್ಷೆಗಳು ಒಂದು ದಿನ ನಡೆಯುತ್ತೆ. ಮೂರು ವಿಷಯಗಳಿಗೆ ಒಂದು ಪರೀಕ್ಷೆ ನಡೆಯುತ್ತದೆ. ಭಾಷೆಗಳ ಪರೀಕ್ಷೆ ಮತ್ತೊಂದು ದಿನ ನಡೆಯುತ್ತದೆ. ಈ ಬಾರಿ ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಇರುತ್ತದೆ ಎಂದು ತಿಳಿಸಿದರು.

ಕೊರೋನಾ ಸೋಂಕಿತ ವಿದ್ಯಾರ್ಥಿಯೂ ಪರೀಕ್ಷೆ ಬರೆಯಬಹುದು.

ಪರೀಕ್ಷಾ ಮೇಲ್ವಿಚಾರಕರು ಎನ್ 95 ಮಾಸ್ಕ್ ಹಾಕಬೇಕು. ಅಗತ್ಯವಿದ್ದರೆ ಫೇಸ್ ಶೀಲ್ಡ್ ಹಾಕಬೇಕು. ಕೊಠಡಿ ಮೇಲ್ವಿಚಾರಕರು ಕಡ್ಡಾಯವಾಗಿ ಒಂದು ಡೋಸ್ ಕೋವಿಡ್ ಲಸಿಕೆ ಪಡೆಯಬೇಕು.  ಕೊರೋನಾ ಸೋಂಕಿತ ವಿದ್ಯಾರ್ಥಿ ಪರೀಕ್ಷೆ ಬರೆಯಬಹುದು. ಪರೀಕ್ಷೆ ಬರೆಯುವ ಹಂಬಲವಿದ್ದರೆ ಬರೆಯಬಹುದು. ಕೋವಿಡ್ ಕೇರ್ ಸೆಂಟರ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಇನ್ನು ಪರೀಕ್ಷಾ ಕೇಂದ್ರದ ಸುತ್ತ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ENGLISH SUMMARY….

SSLC Exam date fixed
Bengaluru, June 28, 2021 (www.justkannada.in): The date of the SSLC exam has been fixed. The exams will be held on July 19 and July 22, 2021, according to Primary and Secondary Education Minister Suresh Kumar.
He addressed a press meet held in Bengaluru today along with the officials concerned and informed that the SSLC exams for core subjects will be held in July 19 and language exams will be held on July 22, from 10.30 am to 1.30 pm. The hall tickets will be distributed on June 30.
“As many as 8,76,581 students are appearing for the SSLC exams this year. The Health Department has already provided an SOP to conduct the exams. Discussions have been held with the Deputy Commissioners, CEO, and Treasury officers regarding the guidelines. SSLC exams will be conducted only for two days this year. While Mathematics, Social Science and Science exams will be held on one day, language exams will be conducted on another day. The exams will be based on multiple-choice questions,” he informed.
Keywords: SSLC/ exams/ July 19/ July 22/ two days

Key words: Date -fix -SSLC exam- minister- suresh kumar