ಬೆಂಗಳೂರು,ಜೂನ್,13,2023(www.justkannada.in): ಮಗಳೊಬ್ಬಳು ತನ್ನತಾಯಿಯನ್ನೇ ಕೊಂದು ಸೂಟ್ ಕೇಸ್ ನಲ್ಲಿ ಶವವನ್ನು ಪೊಲೀಸ್ ಠಾಣೆಗೆ ತಂದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಮೈಕೋಲೇಔಟ್ ಪೊಲೀಸ್ ಠಾಣೆಗೆ ಮಗಳೊಬ್ಬಳು ತನ್ನ ತಾಯಿಯ ಶವವನ್ನ ಸೂಟ್ ಕೇಸ್ ನಲ್ಲಿ ತಂದಿದ್ದು ಅಲ್ಲಿದ್ದ ಪೊಲೀಸರು ಶಾಕ್ ಆದರು. ಪುತ್ರಿ ಸೋನಾಲಿ ಸೇನ್ ಎಂಬುವವಳೆ ಈ ಕೃತ್ಯವೆಸಗಿರುವುದು. ಸೋನಾಲಿ ಸೇನ್ ಕುಟುಂಬ ಕೊಲ್ಕತ್ತಾ ಮೂಲದವರಾಗಿದ್ದು, ಕಳೆದ 6 ವರ್ಷಗಳಿಂದ ನಗರದ ಬಿಳೆಕಳ್ಳಿಯ ಎನ್ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಫ್ಲಾಟ್ ನಲ್ಲಿ ಸೋನಾಲಿ ಸೇನ್, ಸೋನಾಲಿ ಸೇನ್ ಪತಿ, ಮಗ, ಅತ್ತೆ ಮತ್ತು ಸೋನಾಲಿ ಸೇನ್ ತಾಯಿ ವಾಸವಾಗಿದ್ದರು.
ನಿನ್ನೆ ಬೆಳಿಗ್ಗೆ 7 ಗಂಟೆಗೆ ಸೋನಾಲಿ ಸೇನ್ ತಾಯಿಗೆ ನಿದ್ದೆ ಮಾತ್ರೆ ನೀಡಿದ್ದು, ಬಳಿಕ ಬೆಳಿಗ್ಗೆ 11 ಗಂಟೆಗೆ ತಾಯಿ ಹೊಟ್ಟೆ ನೋವು ಎಂದಿದ್ದರು. ಈ ವೇಳೆ ಸೋನಾಲಿ ಸೇನ್ ತಾಯಿದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸೂಟ್ ಕೇಸ್ ನಲ್ಲಿ ತಾಯಿಯ ಶವ ಹಾಕಿಕೊಂಡು ಮಧ್ಯಾಹ್ನ 1 ಗಂಟೆಗೆ ಊಬರ್ ಕ್ಯಾಬ್ ನಲ್ಲಿ ಮೈಕೋಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದಾಳೆ ಎನ್ನಲಾಗಿದೆ.
ಸೂಟ್ಕೇಸ್ನಲ್ಲಿ ಮೃತದೇಹ ತಂದದ್ದನ್ನು ಕಂಡ ಪೊಲೀಸರು ಶಾಕ್ ಆಗಿದ್ದು, ಕೂಡಲೆ ಆರೋಪಿ ಸೋನಾಲಿ ಸೇನ್ ಅವರನ್ನು ವಶಕ್ಕೆ ಪಡೆದರು. ಬಳಿಕ ಸೋನಾಲಿ ಅವರನ್ನು ವಿಚಾರಣೆಗೆ ಒಳಪಡಿಸಿದರು.
Key words: Daughter -killed -mother – body – police station – suit case