ಮೈಸೂರು,ಡಿ,2019(www.justkannada.in): ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮಿಕಿ ಗುರುಪೀಠದ 2ನೇ ಜಾತ್ರಾಮಹೋತ್ಸವವನ್ನ ಆಯೋಜಿಸಲಾಗಿದ್ದು, ಮೈಸೂರು ನಗರದ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಮೈಸೂರು ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಅವರನ್ನ ಆಯ್ಕೆ ಮಾಡಲಾಗಿದೆ.
2020 ಫೆಬ್ರವರಿ 8 ಮತ್ತು 9 ರಂದು ಎರಡು ದಿನಗಳ ಕಾಲ ಈ ಜಾತ್ರಾ ಮಹೋತ್ಸವ ನಡೆಯಲಿದೆ. ಇನ್ನು ಜಾತ್ರಾ ಸಮಿತಿಯ ರಾಜ್ಯ ಅಧ್ಯಕ್ಷರನ್ನಾಗಿ ಬಿ.ಶ್ರೀರಾಮುಲು ಅವರನ್ನ ಆಯ್ಕೆ ಮಾಡಲಾಗಿದೆ. ಈ ನಡುವೆ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಹಾಗೂ ಮಠದ ಶ್ರೇಯಾಭಿವೃದ್ದಿಗೆ ಮೈಸೂರು ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಅವರು ವೈಯಕ್ತಿಕವಾಗಿ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ. ಅಲ್ಲದೆ ನಾಯಕ ಸಮಾಜ ಸೇರಿ ಇನ್ನತರ ಸಮಾಜದಿಂದ ಕೈಲಾದಷ್ಟು ದೇಣಿಗೆ ಸಂಗ್ರಹಿಸಿ ಮಠಕ್ಕೆ ನೀಡಲಿದ್ದಾರೆ.
ಇನ್ನು ಜಾತ್ರಾ ಮಹೋತ್ಸವಕ್ಕೆ ಕಳೆದ ಬಾರಿ 10 ಲಕ್ಷ ಜನ ಸೇರಿದ್ದರು. ಈ ಬಾರಿ 20 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಹಾಗೆಯೇ ಕಳೆದ ಬಾರಿ ಜಾತ್ರಾ ಸಮಿತಿಯ ರಾಜ್ಯ ಅಧ್ಯಕ್ಷರನ್ನಾಗಿ ಸತೀಶ್ ಜಾರಕಿಹೊಳಿ ಅವರನ್ನ ನೇಮಿಸಲಾಗಿತ್ತು.
Key words: davanagere-2nd Jatra Mahotsav -Maharishi Valmiki Gurupith- Lokesh Pia -elected – Chairman of Mysore City Jatra Committee