ದಾವಣಗೆರೆ,ಮಾರ್ಚ್,25,2023(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದನ್ನ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.
ಮಾಜಿ ಸಿಎಂ ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದೆ. ಕಾರ್ಯಕರ್ತರನ್ನ ಸರಿಯಾಗಿ ನಡೆಸಿಕೊಳ್ಳದವರು ರಾಜ್ಯದ ಜನರನ್ನ ಹೇಗೆ ನಡೆಸಿಕೊಳ್ಳುತ್ತಾರೆ. ಇಲ್ಲಿ ಯಾರು ಸಣ್ಣವರಲ್ಲ ಯಾರೂ ದೊಡ್ಡವರಲ್ಲ. ಪ್ರತಿ ಬಿಜೆಪಿ ಕಾರ್ಯಕರ್ತ ನನ್ನ ಮಿತ್ರ ನನ್ನ ಸಹೋದರ. ಕರ್ನಾಕಟಕ ಬಿಜೆಪಿ ಕಾರ್ಯಕರ್ತರು ನನ್ನ ಸಹೋದರರಿದ್ದಂತೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಧಾನಿ ಮೋದಿ ಪರೋಕ್ಷವಾಗಿ ಕುಟುಕಿದರು.
ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ನಡೆದ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಲವು ಬಾರಿ ದಾವಣಗೆರೆಗೆ ಬರುವ ಅವಕಾಶ ಸಿಕ್ಕಿದೆ ಪ್ರತಿಬಾರಿ ಬಂದಾಗಲೂ ನಿಮ್ಮ ಆಶೀರ್ವಾದ ಹೆಚ್ಚಾಗುತ್ತಾ ಹೋಗುತ್ತದೆ. ಇಂದಿನ ವಿಜಯಸಂಕಲ್ಪ ಯಾತ್ರೆ ವಿಜಯೋತ್ಸವ ಆಚರಿಸುವ ರ್ಯಾಲಿ. ನಿಮ್ಮನ್ನ ಪದೇ ಪದೇ ಭೇಟಿಯಾಗುತ್ತಿರುವುದು ನನ್ನ ಸೌಭಾಗ್ಯ. ನಿಮ್ಮ ಆಶೀರ್ವಾದ ನನಗೆ ಮತ್ತಷ್ಟು ಶಕ್ತಿ ನೀಡುತ್ತದೆ ಎಂದರು.
ಎಐಸಿಸಿ ಅಧ್ಯಕ್ಷರ ತವರಲ್ಲೇ ಬಿಜೆಪಿ ಗೆಲುವು: ಮಲ್ಲಿಕಾರ್ಜುನ ಖರ್ಗೆಗೆ ಟಾಂಗ್.
ಎಐಸಿಸಿ ಅಧ್ಯಕ್ಷರ ತವರು ಕ್ಷೇತ್ರದಲ್ಲೇ ಬಿಜೆಪಿ ಜಯಭೇರಿ ಬಾರಿಸಿದೆ. ಕಲ್ಬುರ್ಗಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಮೇಯರ್ ಉಪಮೇಯರ್ ಎರಡೂ ಸ್ಥಾನ ಬಿಜೆಪಿ ಗೆದ್ದಿದೆ ಎಂದು ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿ ಮೋದಿ ಟಾಂಗ್ ನೀಡಿದರು.
ಕರ್ನಾಕಟ ಜನರ ಸೇವೆಗೆ ಬದ್ಧನಾಗಿದ್ದೇನೆ ಕಾಂಗ್ರೆಸ್ ಪಾಲಿಗೆ ಕರ್ನಾಟಕ ತಿಜೋರಿಯಲ್ಲಿ ಹಣ ಇಡುವ ಜಾಗವಾಗಿದೆ. ಕಾಂಗ್ರೆಸ್ ನವರು ಬರೀ ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧೀಗಾಗಿ ಬಿಜೆಪಿಗೆ ಬಹುಮತ ನೀಡುವ ಕಾಲ ಬಂದಿದೆ. ಬಿಜೆಪಿ ಸರ್ಕಾರಕ್ಕೆ ಬಹುಮತ ನೀಡುವ ಕಾಲ ಬಂದಿದೆ. ಬಿಜೆಪಿಗೆ ಬಹುಮತ ನೀಡುವಂತೆ ಮೋದಿ ಮನವಿ ಮಾಡಿದರು.
Key words: davanagere- PM-Narendra Modi – Congress – Siddaramaiah