ಹಾಸನಾಂಬೆ ದೇವಿ ದರ್ಶನ ಕಡೆ ದಿನ : ಪತ್ನಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ದೇವಾಲಯಕ್ಕೆ ಭೇಟಿ 

ಹಾಸನ, ನವೆಂಬರ್,16,2020(www.justkannada.in) : ಹಾಸನಾಂಬ ದೇವಾಲಯವು ಪುಣ್ಯಕ್ಷೇತ್ರ. ನಂಬಿಕೆ ಪದಕ್ಕೆ ಪವಿತ್ರ ಕ್ಷೇತ್ರಗಳೇ ಸಾಕ್ಷಿ. ರಾಜ್ಯದ ಜನತೆಯ ಎಲ್ಲ ದುಃಖ ದೂರ ಮಾಡಲಿ ಎಂದು ಹಾಸನಾಂಬೆಯ ಪ್ರಾರ್ಥಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

kannada-journalist-media-fourth-estate-under-loss

ದೀಪಾವಳಿ ಹಬ್ಬದ ದಿನವೇ ಇಂದು ಮುಂಜಾನೆ ಪತ್ನಿಯೊಂದಿಗೆ ಹಾಸನಾಂಬೆ ದೇವಾಲಯಕ್ಕೆ ಬೆಳಗ್ಗೆ 6.45ರ ಸುಮಾರಿಗೆ ಭೇಟಿ ನೀಡಿ ದೇವಿಯ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಮ್ಮಂಥವರಿಗೆ, ರಾಜ್ಯದ ಮಂದಿಗೆ ಇರುವ ನೋವನ್ನು ಪರಿಹರಿಸಲಿ

ಈ ವೇಳೆ ಡಿಕೆಶಿ ಮಾತನಾಡಿ, ಇದೊಂದು ಪುಣ್ಯಕ್ಷೇತ್ರ. ನಂಬಿಕೆ ಪದಕ್ಕೆ ಪವಿತ್ರ ಕ್ಷೇತ್ರಗಳೇ ಸಾಕ್ಷಿ. ಹಾಸನಾಂಬೆ ರಾಜ್ಯದ ಜನತೆಯ ಎಲ್ಲ ದುಃಖ ದೂರ ಮಾಡಲಿ. ನಮ್ಮಂಥವರಿಗೆ, ರಾಜ್ಯದ ಮಂದಿಗೆ ಇರುವ ನೋವನ್ನು ಪರಿಹರಿಸಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

Day,Hassanambe Devi,Darshan,Visit,KPCC,President,Dikeshi,Temple,with,wife

ಇಂದು ಹಾಸನಾಂಬ ದೇವಿಯ ದರ್ಶನದ ಕಡೇ ದಿನ

ಮಧ್ಯಾಹ್ನ 12ರ ಸುಮಾರಿಗೆ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ನವೆಂಬರ್ 5ದೇವಾಲಯದ ಬಾಗಿಲು ತೆರೆಯಲಾಗಿತ್ತು. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಹಾಸನಾಂಬೆ ಭಕ್ತರಿಗೆ ದರ್ಶನ ನೀಡುತ್ತಾಳೆ.

Day,Hassanambe Devi,Darshan,Visit,KPCC,President,Dikeshi,Temple,with,wife

key words ; Day-Hassanambe Devi-Darshan-Visit-KPCC- President-Dikeshi-Temple-with-wife