ಮೈಸೂರು,ಜನವರಿ,16,2021(www.justkannada.in): ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿದ್ದು ಮೈಸೂರಿನ ಟ್ರಾಮಾ ಸೆಂಟರ್ ನಲ್ಲಿ ಕೊರೋನಾ ಲಸಿಕೆ ವಿತರಣೆಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಲನೆ ನೀಡಿದರು.
ಕೊರೋನಾ ಲಸಿಕೆ ಅಭಿಯಾನಕ್ಕೆ ಚಾಲನೆ ಸಿಕ್ಕ ಬಳಿಕ ಮೈಸೂರಿನಲ್ಲಿ ಕೆ.ಆರ್.ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಸಂದೇಶ್ ಮೊದಲನೇ ಲಸಿಕೆ ಪಡೆದಿದ್ದಾರೆ. ಸಂದೇಶ್ ಲಸಿಕೆ ಪಡೆದು ನಿಗಾಘಟಕದಲ್ಲಿದ್ದು ಅರ್ಧ ಗಂಟೆ ವರೆಗೆ ನಿಗಾದಲ್ಲಿರಲಿದ್ದಾರೆ.
ಇನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಜಯಲಕ್ಷ್ಮಿ ಎಂಬುವವರು ಲಸಿಕೆ ಪಡೆದರು. ಇಂದ್ರಮ್ಮ ದಾಖಲಾತಿ ಸಿಸ್ಟಮ್ ನಲ್ಲಿ ಓಪನ್ ಆಗದ ಹಿನ್ನಲೆ, ಜಯಲಕ್ಷ್ಮಿ ಎಂಬುವವರಿಗೆ ಮೊದಲ ಲಸಿಕೆ ನೀಡಲಾಯಿತು. ಕೊರೋನಾ ಲಸಿಕೆ ಪಡೆಯಲು ಎರಡನೇಯವರಾಗಿ ಜಯಲಕ್ಷ್ಮಿ ಅವರು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಇಂದ್ರಮ್ಮ ಅವರ ದಾಖಲಾತಿ ಸಿಸ್ಟಮ್ ನಲ್ಲಿ ಓಪನ್ ಆಗದ ಕಾರಣ, ಇಂದ್ರಮ್ಮ ಬದಲಿಗೆ ಜಯಲಕ್ಷ್ಮಿ ಎಂಬುವವರಿಗೆ ಮೊದಲ ಲಸಿಕೆ ನೀಡಲಾಯಿತು.
ಮೈಸೂರಿನಲ್ಲಿ 9 ಕಡೆ ಕೊರೊನಾ ಲಸಿಕೆ ವಿತರಣೆ- ಡಿಸಿ ರೋಹಿಣಿ ಸಿಂಧೂರಿ…
ಕೊರೋನಾ ಲಸಿಕೆ ವಿತರಣೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, ಕೊನೆಗೂ ಕೊರೊನಾಗೆ ಲಸಿಕೆ ಸಿಕ್ಕಿದೆ. ನಮ್ಮ ಭಾರತದ ಕಂಪೆನಿಯ ಲಸಿಕೆ ಸಿದ್ದವಾಗಿರೊದು ಸಂತಸದ ವಿಚಾರ. ಈಗಾಗಲೇ ಪ್ರಧಾನಿ ಮೋದಿಯವರು ಲಸಿಕೆ ವಿತರಣೆಗೆ ಚಾಲನೆ ನೀಡಿದ್ದಾರೆ. ಮೈಸೂರಿನಲ್ಲಿ 9 ಕಡೆ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಪ್ರತಿ ಲಸಿಕಾ ಕೇಂದ್ರದಲ್ಲೂ 100ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಗೆ 36 ಸಾವಿರ ಡೋಸ್ ಲಸಿಕೆ ಬೇಡಿಕೆ ಇದೆ. ಸದ್ಯ 20500 ಡೋಸ್ ಲಸಿಕೆ ಬಂದಿದೆ. ಇನ್ನು ಎರಡು ದಿನಗಳಲ್ಲಿ 20500ಮಂದಿಗೆ ಲಸಿಕೆ ಪೂರ್ವಗೊಳಿಸುತ್ತೇವೆ ಎಂದರು.
ಇವತ್ತು ಆರೋಗ್ಯ ಸಿಬ್ಬಂದಿ ಲಸಿಕೆ ನೀಡಲಾಗುತ್ತಿದೆ. ನಾಳೆ ಪೌರಕಾರ್ಮಿಕರು, ಡಿ ಗ್ರೂಪ್ ನೌಕರರಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ENGLISH SUMMARY…
COVID vaccination drive launched in Mysuru in the presence of DC Rohini Sindhoori
Mysuru, Jan. 16 (www.justkannada.in): The first phase of vaccination against COVID-19 pandemic was launched in Mysuru District today.
The COVID vaccine campaign was launched at 9 centres in Mysuru District on the first day today. Three persons were vaccinated at the Trauma Care Centre, in PKTB Hospital premises in Mysuru, in the presence of Deputy Commissioner Rohini Sindhoori.
Speaking on the occasion the DC said it is indeed a matter of pride and happiness that an Indian company has been successful in researching a vaccine against COVID-19 pandemic. “There is a demand for 36,000 vaccines in the district as of now and we have received 20,500 doses. In the first phase, vaccine will be given to registered health activists and D group workers. Information of the beneficiaries in the second round is being collected, which includes pourakarmikas, revenue officers, and police officers. The vaccine will be made available to the general public after that,” she explained.
Keywords: COVID vaccination drive launched in Mysuru/ DC Rohini Sindhoori
Key words: DC Rohini Sindhuri- corona- vaccine- delivery -Mysore