ಮೈಸೂರು,ಫೆಬ್ರವರಿ,17,2021(www.justkannada.in): ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳ ‘ನಡೆ ಹಳ್ಳಿ ಕಡೆ’ ಎಂಬ ನೂತನ ಕಾರ್ಯಕ್ರಮವನ್ನ ಸರ್ಕಾರ ಜಾರಿಗೆ ತಂದಿದ್ದು ಈ ಹಿನ್ನೆಲೆಯಲ್ಲಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರು ಜಿಲ್ಲೆಯ ತೆರಿಕಲ್ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಫೆ.20ರಂದು ಡಿಸಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಜಾರಿಗೆ ಬರಲಿದ್ದು ಈ ಹಿನ್ನೆಲೆಯಲ್ಲಿ ಅಂದು ಹೂಣಸೂರು ತಾಲೂಕು ಬಿಳಿಕೆರೆ ಹೋಬಳಿಯ ತೆರಿಕಲ್ ಗ್ರಾಮದಲ್ಲಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರು ಗ್ರಾಮವಾಸ್ತವ್ಯ ಹೂಡಲಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿ ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕಂದಾಯ ಇಲಾಖೆಯನ್ನು ಜನರ ಬಳಿಗೆ ಕೊಡೊಯ್ಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನ ಜಾರಿಗೆ ತರಲಾಗಿದ್ದು ಹೀಗಾಗಿ ಅಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಗ್ರಾಮದಲ್ಲೇ ವಾಸ್ತವ್ಯ ಹೂಡಿ ಜನರ ಸಮಸ್ಯೆಯನ್ನ ಖುದ್ದು ಆಲಿಸಲಿದ್ದಾರೆ.
ಇನ್ನು ತೆರಕಲ್ ಗ್ರಾಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಡಿಸಿ ರೋಹಿಣಿ ಸಿಂಧೂರಿ ಅವರು ವಾಸ್ತವ್ಯ ಹೂಡಲಿದ್ದು, ಡಿಸಿ ಗ್ರಾಮ ವಾಸ್ತವ್ಯಕ್ಕೆ ಸಿದ್ದತೆ ನಡೆಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ENGLISH SUMMARY…
Mysuru DC village stay program at Terikal Village on Feb. 20
Mysuru, Feb. 17, 2021 (www.justkannada.in): The government has introduced a new program called ‘Deputy Commissioners walk towards Village’ every Thursday of the month. Mysuru DC Rohini Sindhuri will stay at the Terikal Village in Mysuru District as part of this program.
The Terikal Village is located in Bilikere Hobli of Hunasuru Taluk. The DC will address the grievances of the people. The objective of this program is to bring Revenue Department officials to the doorsteps of the people to solve their problems. Therefore, the Deputy Commissioner will stay overnight at the village to address the problems of the people.
Keywords: Mysuru DC Rohini Sindhuri/ Mysuru/ Village stay in Terikal Village
Key words: DC -village – program -Therikal village – Mysore -20th February.