ಬೆಂಗಳೂರು,ಜೂ,22,2020(www.justkannada.in): ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೇವೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕೊರೋನಾ ಎದುರಿಸಲು ಮೊದಲು ಅಷ್ಟೊಂದು ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಈಗ ಕೊರೋನಾ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಹೀಗಾಗಿ ಜನರು ಆತಂಕಪಡುವುದು ಬೇಡ. ಕೊರೋನಾ ನಿಯಂತ್ರಣ ಮಾಡುತ್ತೇವೆ ಎಂದು ತಿಳಿಸಿದರು.
ಮೊದಲು ಎಲ್ಲರಿಗೂ ಒಂದೇ ಕಡೆ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಕೊರೋನಾ ಲಕ್ಷಣ ಇಲ್ಲದವರಿಗೆ ಮತ್ತು ಕೊರೋನಾ ಲಕ್ಷಣ ಇರುವವರಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಬೆಡ್ ಕೊರತೆ ಇಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.
ಕನಕಪುರದಲ್ಲಿ ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಕನಕಪುರ ಲಾಕ್ ಡೌನ್ ಗೆ ಸರ್ಕಾರ ಆದೇಶ ಮಾಡಿಲ್ಲ. ಜನ ತಾವೇ ಸ್ವಯಂ ಲಾಕ್ ಡೌನ್ ವಿಧಿಸಿಕೊಂಡಿದ್ದಾರೆ. ಇಲ್ಲಿ ಡಿಕೆ ಶಿವಕುಮಾರ್ ಲಾಕ್ ಡೌನ್ ಹೇರಲು ಬರಲ್ಲ. ಅವರು ಸಲಹೆ ನೀಡಬಹುದಷ್ಟೆ ಡಿಕೆಶಿ ಬಗ್ಗೆ ಹೇಳಲು ಹೋದ್ರೆ ಸಾವಿರ ಎಪಿಸೋಡ್ ಆಗುತ್ತೆ ಅಷ್ಟೆ ಎಂದು ಲೇವಡಿ ಮಾಡಿದರು.
Key words: DCM- Ashwath Narayan -clarified – lockdown- again – state.