ಹಿರಿಯ ಪತ್ರಕರ್ತ ಎಂ.ಎನ್.ಚಕ್ರವರ್ತಿ (ನಚ್ಚಿ)  ಅವರ ನಿಧನಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಸಂತಾಪ

ಬೆಂಗಳೂರು,ಮಾರ್ಚ್,1,2021(www.justkannada.in):  ರಾಜ್ಯ ಕಂಡ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಎಂ.ಎನ್.ಚಕ್ರವರ್ತಿ (ನಚ್ಚಿ) ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಶೋಕ ವ್ಯಕ್ತಪಡಿಸಿದ್ದಾರೆ.jk

ಕಳೆದ ಮೂರು ದಶಕಗಳಿಂದ ಆಂಗ್ಲ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದ ನಚ್ಚಿ, ಕನ್ನಡ ಪತ್ರಿಕೋದ್ಯಮಕ್ಕೂ ಗಣನೀಯ ಸೇವೆ ಸಲ್ಲಿಸಿದ್ದಾರೆ. ಲಂಕೇಶ್‌ ಪತ್ರಿಕೆಯಿಂದ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದ ಅವರು, ಮಾಧ್ಯಮ ಮೌಲ್ಯಗಳಿಗೆ ಕಟ್ಟುಬಿದ್ದು ಕೆಲಸ ಮಾಡಿದವರು. DCM -Ashwath Narayan- condoles -death - journalist -MN Chakravarthy (Nachchi).

ಇಂಡಿಯನ್‌ ಎಕ್ಸ್‌ಪ್ರೆಸ್‌, ಡೆಕ್ಕನ್‌ ಕ್ರಾನಿಕಲ್‌ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಹೊಸ ತಲೆಮಾರಿನ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು. ನಚ್ಚಿ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಹಾಗೂ ಅವರ ಜತೆ ಒಡನಾಡಿದ ಪತ್ರಕರ್ತ ಮಿತ್ರರಿಗೆ ಸಿಗಲಿ, ದೇವರು ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡುವುದಾಗಿ ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ENGLISH SUMMARY…..

DCM Ashwathnarayan condoles death of senior journalist M.N. Chakravarthi (Nachchi)
Bengaluru, March 2, 2021 (www.justkannada.in): Deputy Chief Minister Dr. C.N. Ashwathnarayana has expressed his condolences on the death of senior journalist of the State M.N. Chakravarthi (Nachch).
Nachchi was into active journalism from the last three decades. His contribution to Kannada journalism is also immense. He started his journalism career from ‘Lankesh Patrike,’ and was committed to the values of journalism.
He had sered in State and National level print media houses including Indian Express and Deccan Herald. DCM Dr. Ashwathnarayana has expressed his heartfelt condolences on Nachchi’s death.
Keywords: Senior Journalist/ M.N. Chakravarthi (Nachchi)/ DCM Dr. C.N. Ashwathnarayan

Key words: DCM -Ashwath Narayan- condoles -death – journalist -MN Chakravarthy (Nachchi).