ಬೆಂಗಳೂರು,ಮಾ,12,2020(www.justkannada.in): ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಮಾರಕ ಕೊರೊನಾ ವೈರಸ್ ಭೀತಿ ಎಲ್ಲೆಡೆ ಹರಡಿದ್ದು ಈ ಹಿನ್ನೆಲೆ ಹೊರದೇಶದಲ್ಲಿರುವ ಕನ್ನಡಿಗರನ್ನ ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಕರೆತರುವುದಾಗಿ ಡಿಸಿಎಂ ಅಶ್ವಥ್ ನಾರಾಯಣ್ ಭರವಸೆ ನೀಡಿದ್ದಾರೆ.
ಇಟಲಿಯಲ್ಲಿ ಈ ಮಾರಣಾಂತಿಕ ವೈರಸ್ ನಿಂದಾಗಿ ಜನಜೀವನವೇ ಸ್ತಬ್ಧಗೊಂಡಿದ್ದು, ಇಟಲಿಯಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಇವರು ಭಾರತಕ್ಕೆ ಬರಲು ಮೆಡಿಕಲ್ ರಿಪೋರ್ಟ್ ಅಗತ್ಯವಿದ್ದು ಮೆಡಿಕಲ್ ರಿಪೋರ್ಟ್ ಪಡೆಯುವುದು ಇಟಲಿಯಲ್ಲಿ ಕಷ್ಟವಾಗಿದೆ. ಹೀಗಾಗಿ ತಮ್ಮನ್ನ ಭಾರತಕ್ಎಕ ವಾಪಸ್ ಕರೆಸಿಕೊಳ್ಳಲು ನೆರವಾಗಿ ಎಂದು ಇಟಲಿಯಲ್ಲಿರುವ ಕನ್ನಡಿಗರು ಮನವಿ ಮಾಡಿದ್ದರು.
ಈ ಸಂಬಂಧ ಟ್ವೀಟ್ ಮಾಡಿರುವ ಡಿಸಿಎಂ ಅಶ್ವಥ್ ನಾರಾಯಣ್, ಇಟಲಿ ಸೇರಿದಂತೆ ಕೊರೋನಾ ಪೀಡಿತ ಹೊರದೇಶಗಳಲ್ಲಿರುವ ಕನ್ನಡಿಗರನ್ನು ಕರೆತರಲು ನಮ್ಮ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಜೊತೆಗೆ ಸಹಕರಿಸಿ ಕಾರ್ಯೋನ್ಮುಖವಾಗಿದೆ. ತಜ್ಞ ವೈದ್ಯರನ್ನು ಕರೆದುಕೊಂಡು ಹೋಗಿ ಅಲ್ಲಿಯೇ ತೀವ್ರ ತಪಾಸಣೆಗೆ ಒಳಪಡಿಸಿ ಸುರಕ್ಷತೆಯಿಂದ ಅವರನ್ನು ಇಲ್ಲಿಗೆ ವಾಪಸ್ ಕರೆತರಲಾಗುವುದು‘ ಎಂದು ಅಭಯ ನೀಡಿದ್ದಾರೆ.
Key words: DCM- Ashwath Narayan –promises- safe- return – Kannadigas- Abroad