ಬೆಂಗಳೂರು,ಮಾ,5,2020(www.justkannada.in): ರಾಜ್ಯವೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿರುವ ಬಜೆಟ್ ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಟಾನಿಕ್ ನಂತೆ ಕೆಲಸ ಮಾಡಲಿದೆ. ಹದಗೆಟ್ಟಿದ್ದ ಅರ್ಥಿಕತೆಗೆ ಚಿಕಿತ್ಸೆಯಾಗಲಿದೆ. ಸಮಗ್ರ ಕರ್ನಾಟಕದ ಅಭಿವದ್ಧಿಗೆ ಮುಂಗಡಪತ್ರ ವೇಗ ನೀಡಲಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.
ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ನೆನೆಗುದಿಗೆ ಬಿದ್ದಿರುವ ಯೋಜನೆಗಳು ಕಾಲಮಿತಿಯೊಳಗೆ ಸಾಕಾರಗೊಳ್ಳಲಿವೆ. ಪ್ರಾದೇಶಿಕ ಸಮತೋಲನದ, ಅಭಿವೃದ್ಧಿ ಸಮತೋಲನದ ಸ್ಪಷ್ಟ ದಿಕ್ಸೂಚಿಯುಳ್ಳ ನೈಜ, ಸಹಜ ಜನಪರ ಬಜೆಟ್ ಇದಾಗಿದೆ. ಮಹಿಳೆಯರು, ಯುವಕರು, ಕಾರ್ಮಿಕರು, ಕೃಷಿಕರು, ನಗರವಾಸಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಸಲ್ಲುವ ಉತ್ತಮ ಬಜೆಟ್ ಇದಾಗಿದೆ. ಕೃಷಿಗೆ ಹಿಂದೆಂದೂ ನೀಡಿರದಷ್ಟು ಪ್ರಾಮುಖ್ಯತೆ ನೀಡಲಾಗಿದೆ. ನೀರಾವರಿಗೂ ಒತ್ತು ನೀಡಲಾಗಿದೆ ಎಂದರು.
ಬೆಂಗಳೂರು ನಗರಾಭಿವೃದ್ಝಿ, ಉದ್ಯೋಗ ಸೃಷ್ಟಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ, ಪರಿಶಿಷ್ಟ ಜಾತಿ-ಪಂಗಡ ಜನಾಂಗದ ಕಲ್ಯಾಣ, ಶಿಕ್ಷಣ, ತಂತ್ರಜ್ಞಾನ ಸೇರಿ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.
Key words: DCM Ashwath Narayan – talking -about -state budget