ರಾಮನಗರ,ಫೆಬ್ರವರಿ, 15,2025 (www.justkannada.in): ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರ ಸತ್ತೋಗಿದೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ರಾಮನಗರದ ಕನಕಪುರದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಮೊದಲು ಹೇಳಪ್ಪ. ನಾವೇನು ಸತ್ತೋಗಿದ್ದೇವೆ ಓಕೆ. ನೀನು ಏನು ಮಾಡಿದ್ದೀಯಾ ಈಗ ಮಂತ್ರಿಗಿರಿ ಕೊಟ್ಟಿದ್ದಾರೆ ಏನು ಮಾಡಿದ್ದೀಯಾ? ನಾವು ಸಹಕಾರ ಕೊಡ್ತೇವೆ ನೀವು ರಾಜಕೀಯ ಮಾಡ್ತೀಯಾ ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದರೇ ತಕರಾರು ಮಾಡುತ್ತಿಯಾ. ನಾವು ಆ ರೀತಿ ತಕರಾರು ಮಾಡುವ ಕೆಲಸ ಮಾಡಲ್ಲ ರಾಜನಾಥ ಸಿಂಗ್ ಬಂದು ಏನು ಹೇಳಿದ್ರು ತಲೆಯಲ್ಲಿ ಇರಲಿ ಎಂದು ಟಾಂಗ್ ಕೊಟ್ಟರು.
ಒಂದು ದಿನದಲ್ಲಿ ಮೇಕದೇಟು ಯೋಜನೆಗೆ ಸಹಿ ಹಾಕ್ತೀನಿ ಎಂದೆ. ಯಾಕೆ ಮಾಡಲಿಲ್ಲ. ನಿನಗೆ ರಾಜಕಾರಣವೇ ಮುಖ್ಯ ಹೊರತು ಅಭಿವೃದ್ಧಿಯಲ್ಲ. ದ್ವೇಷದ ರಾಜಕಾರಣವೇ ನಿನಗೆ ದೊಡ್ಡದು ದ್ವೇಷದಿಂದ ಯಾರು ಏನೂ ಮಾಡಲು ಆಗಲ್ಲ. ಚಕ್ರವರ್ತಿಗಳೆಲ್ಲಾ ಕೆಳಗೆ ಬಿದ್ದೋಗಿದ್ದಾರೆ ರಾಜಕಾರಣದಲ್ಲಿ ಯಾರೂ ಪರ್ಮನೆಂಟ್ ಅಲ್ಲ ಎಂದು ಏಕವಚನದಲ್ಲೇ ಡಿಕೆ ಶಿವಕುಮಾರ್ ಗುಡುಗಿದರು.
Key words: DCM, DK Shivakumar, Union Minister, HDK, development