ಬೆಂಗಳೂರು,ಮಾರ್ಚ್,4,2025 (www.justkannada.in): ಸಿನಿಮಾ ಕಲಾವಿದರ ಕುರಿತು ನಟ್ಟು ಬೋಲ್ಟ್ ಟೈಟ್ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ನನ್ನನ್ನು ಟೀಕೆ ಮಾಡೊದಾದ್ರೆ ಮಾಡಲಿ ಸಂತೋಷ. ನಾನು ಹಳ್ಳಿ ಭಾಷೆಯಲ್ಲಿ ಹೇಳಿದ್ದೇನೆ. ನಾನು ಇಂಡಸ್ಟ್ರಿ ಒಳ್ಳೆಯದಕ್ಕೆ ಹೇಳಿದ್ದೇನೆ. ಇಂದು ಇಂಡಸ್ಟ್ರಿ ಸಾಯುತ್ತಿದೆ ಎಂದರು.
ತಮ್ಮ ಹೇಳಿಕೆಗೆ ರಾಜೇಂದ್ರ ಸಿಂಗ್ ಬಾಬು ಆಕ್ಷೇಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ , ಅಧಿಕಾರದ ದರ್ಪ ಇದ್ದುದ್ದರಿಂದಲೇ ಚೇರ್ಮನ್ ಮಾಡಿದ್ದೇವು. ಚೇರ್ಮನ್ ಮಾಡಿದ್ದರೂ ಒಂದು ದಿನವೂ ಅವರು ಬರಲಿಲ್ಲ. ಸಿನಿಮಾ ಇಂಡಸ್ಟ್ರಿ ಸಾಯುತ್ತಿದೆ. ನಿಮಗಾಗಿ ನಾವು ಅಂತರಾಷ್ಟ್ರೀಯ ಸಿನಿಮೋತ್ಸವ ಮಾಡಿದ್ದೇವೆ ಎಂದರು.
Key words: DCM, DK Shivakumar, defends, ‘nut and bolt, statement