ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ-ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಸಿಎಂ ಡಿಕೆ ಶಿವಕುಮಾರ್ ಕಿವಿಮಾತು

ಬೆಂಗಳೂರು,ಮಾರ್ಚ್,17,2025 (www.justkannada.in): ವ್ಯಕ್ತಿ ಪೂಜೆಯನ್ನು ಬಿಟ್ಟು ಪಕ್ಷ ಪೂಜೆ ಮಾಡಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿವಿಮಾತು ಹೇಳಿದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿಯ ನೂತನ ಅಧ್ಯಕ್ಷರಾಗಿ ಹೆಚ್.ಎಸ್.ಮಂಜುನಾಥ್ ಗೌಡ  ಪದ ಗ್ರಹಣ ಕಾರ್ಯಕ್ರಮ ಇಂದು ಅರಮನೆ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್,  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗ  ಅಧಿಕಾರಕ್ಕೆ ಬಂದಂತೆ . ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಚುನಾವಣೆಗೆ ಸ್ಪರ್ಧಿಸಿದ್ದೆ. ರಾಜ್ಯದಲ್ಲಿ 25 ಲಕ್ಷ ಸದಸ್ಯರ ನೋಂದಣಿ ಮಾಡಲಾಗಿದೆ . ಚುನಾವಣೆಯಲ್ಲಿ ಸೋಲು ಗೆಲುವು ಅನುಭವಿಸಬೇಕು ಎಂದರು.

ಸಾಧನೆ ಮಾಡಲು ಹೋರಾಡುವವನಿಗೆ ದಾರಿಯಲ್ಲಿ ನೂರಾರು ಅಡೆತಡೆಗಳು ಇರುತ್ತವೆ. ನಾವು ಶಕ್ತಿಶಾಲಿಯಾಗಿದ್ದಷ್ಟು ಶತ್ರುಗಳು ಜಾಸ್ತಿ, ಕಡಿಮೆ ಶಕ್ತಿಶಾಲಿಗಳಾದರೆ ಕಡಿಮೆ ಶತ್ರುಗಳು, ಶಕ್ತಿಶಾಲಿಗಳೇ ಅಲ್ಲದಿದ್ದರೆ ಶತ್ರುಗಳೇ ಇರುವುದಿಲ್ಲ. ಯುವಕರ ನಡೆ ಹಳ್ಳಿ, ಬೂತ್ ಕಡೆ, ನಿಮ್ಮ ನಡೆ ಗ್ಯಾರಂಟಿ ಕಡೆ ಇರಬೇಕು. ಆ ಮೂಲಕ 2028ರಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ  ತರಲು ಗಮನಹರಿಸಿ ಎಂದು ಕರೆ ನೀಡಿದರು.

Key words: DCM, DK Shivakumar, young, Congress, workers