ನವದೆಹಲಿ,ಮಾರ್ಚ್,18,2025 (www.justkannada.in): ಧರ್ಮದ ಆಧಾರದಲ್ಲಿ ಮುಸ್ಲೀಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್, ಕುವೆಂಪು ಅವರ ನಾಡಗೀತೆ ನೋಡಿ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದಾರೆ. ಹಿಂದುಳಿದ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗುತ್ತಿದೆ. ಒಂದು ಧರ್ಮಕ್ಕೆ ಎಲ್ಲಿ ಕೊಟ್ಟಿದ್ದೇವೆ. ಎಸ್ ಸಿ ಎಸ್ ಟಿಗೂ ಮೀಸಲಾತಿ ನೀಡಲಾಗಿದೆ. ಹಿಂದುಳಿದ ವರ್ಗವನ್ನು ಮೇಲೆತ್ತುವುದು ಹೇಗೆ. ನಾವೆಲ್ಲರೂ ಒಂದು. ಎಲ್ಲಾ ವರ್ಗಕ್ಕೆ ಆದ್ಯತೆ ಕೊಡ್ತೇವೆ ಎಂದರು.
ಒಳಮೀಸಲಾತಿ ಜಾರಿ ವಿಚಾರ, ಒಳ ಮೀಸಲಾತಿ ಜಾರಿ ಮಾಡಲು ನಾವು ಬದ್ದರಾಗಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಮಾರ್ಚ್ 27 ರಂದು ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ಸಭೆ ಇದೆ. ನಮಗೂ ಬರಲು ಹೇಳಿದ್ದಾರೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ ಎಂದರು.
Key words: Reservation, Muslims, contracts, DCM DK Shivakumar