ಸಂವಿಧಾನ ಬದಲಿಸುವುದಾಗಿ ನಾನು ಹೇಳಿಲ್ಲ: ಬಿಜೆಪಿ ವಿರುದ್ದ ಕಾನೂನು ಹೋರಾಟ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,24,2025 (www.justkannada.in): ಸಂವಿಧಾನ ಬದಲಿಸುವುದಾಗಿ ನಾನು ಹೇಳಿಲ್ಲ. ಬಿಜೆಪಿಯವರು ಸುಳ್ಳು ಆರೋಪ ಮಾಡಿದ್ದಾರೆ. ಬಿಜೆಪಿ ವಿರುದ್ದ ಕಾನೂನು ಹೋರಾಟ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಸಂವಿಧಾನ ಬದಲಿಸುವುದಾಗಿ ನಾನು ಹೇಳಿಲ್ಲ ಸುಳ್ಳು ಹಬ್ಬಿಸುವುದರಲ್ಲಿ ಬಿಜೆಪಿಯವರು ನಿಸ್ಸಿಮರು. ಬಿಜೆಪಿಯವರು ನನ್ನ ಹೇಳಿಕೆ ತಿರುಚಿದ್ದಾರೆ ಅಪಪ್ರಚಾರ ಸುಳ್ಳು ಹೇಳೋದೆ ಅವರ ಕೆಲಸ ಎಂದು ಕಿಡಿಕಾರಿದರು.

ಬಿಜೆಪಿಗೆ ಮಾತನಾಡಲು ರಾಜಕೀಯವಿಲ್ಲ. ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ.  ಬಿಜೆಪಿ ವಿರುದ್ದ ಕಾನೂನು ಹೋರಾಟ ಮಾಡುವೆ. ಬಿಜೆಪಿ ವಿರುದ್ದ ಹಕ್ಕುಚ್ಯುತಿ ಮಂಡಿಸುತ್ತೇವೆ  ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಮುಸ್ಲೀಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

Key words: constitution, change, Statement, BJP, DCM, DK Shivakumar