ನವದೆಹಲಿ,ಏಪ್ರಿಲ್,4,2025 (www.juskannada.in): ವಿಧಾನ ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಸದನದಲ್ಲಿ ಧ್ವನಿ ಎತ್ತುವವರಿಗೆ ಅವಕಾಶ ಕೊಡಬೇಕು ಎಂದು ತಿಳಿಸಿದರು.
ಈ ಕುರಿತು ಇಂದು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕಾರ್ಯಕರ್ತರಿಗೆ ಅವಕಾಶ ಕೊಡಬೇಕೆಂಬುದು ನಮ್ಮ ಅಭಿಪ್ರಾಯ. ಸದನದಲ್ಲಿ ಧ್ವನಿ ಎತ್ತುವವರಿಗೆ ಅವಕಾಶ ಕೊಡಬೇಕು. ಈಗಷ್ಟೇ ವಿಧಾನ ಪರಿಷತ್ ಸದಸ್ಯರ ಆಯ್ಕೆ ಬಗ್ಗೆ ಚರ್ಚೆ ಮಾಡಿದ್ದೇವೆ ಸದ್ಯದಲ್ಲೇ ನಾಮ ನಿರ್ದೇಶನ ಆಗಲಿದೆ ಎಂದರು.
ಪರಿಷತ್ ನಾಮ ನಿರ್ದೇಶನ ಪಕ್ಷದ ಕಾರ್ಯಕರ್ತರು ಪಕ್ಷದ ಪರವಾಗಿ ಧ್ವನಿ ಎತ್ತುವವರಿಗೆ ನೀಡಬೇಕು ಎಂಬುದು ನಮ್ಮ ಉದ್ದೇಶ. ಸುಮ್ಮನೆ ಇರುವ ನಿರುದ್ಯೋಗಿಗಳಿಗೆ ಕೊಟ್ಟಂತೆ ಆಗಬಾರದು. ಉತ್ತಮವಾಗಿ ಮಾತನಾಡುವಂತಹ ಪ್ರತಿನಿಧಿಗಳಿಗೆ ಸ್ಥಾನ ನೀಡಬೇಕೆಂಬುದು ನಮ್ಮ ಅಭಿಪ್ರಾಯ ಎಂದರು.
Key words: Nomination, Legislative Council, DCM, DK Shivakumar