ಬೆಂಗಳೂರು,ಏಪ್ರಿಲ್, 21,2025 (www.justkannada.in): ಜಾತಿಗಣತಿಯ ಮೂಲಪ್ರತಿಗಳು ಇಲ್ಲ. ವರದಿಯ ಮೂಲ ದಾಖಲೆ ಇಲ್ಲ ಎಂಬ ಆರ್.ಅಶೋಕ್ ಆರೋಪ ನಿರಾಧಾರವಾದದ್ದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಜಾತಿಗಣತಿಯ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗ ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಅವರು ಹೇಗೆ ಸುಳ್ಳು ಹೇಳಲು ಸಾಧ್ಯ. ಅಶೋಕ್ ತಪ್ಪು ಹೇಳಿಕೆ ನೀಡಬಾರದು. ಒಂದು ವೇಳೆ ಆರ್.ಅಶೋಕ್ ರವರಿಗೆ ಅನುಮಾನವಿದ್ದರೆ ಜಯಪ್ರಕಾಶ್ ಹೆಗ್ಡೆಯವರನ್ನೇ ಕೇಳಬಹುದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಕುಟುಕಿದರು.
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಬಾರದಿತ್ತು.. ಜನಿವಾರ, ಲಿಂಗ ಸೇರಿದಂತೆ ಧಾರ್ಮಿಕವಾಗಿ ಅನೇಕ ಆಚರಣೆಗಳಿರುತ್ತವೆ. ಮಹಿಳೆಯರು ಮಾಂಗಲ್ಯಸರ ಕೂಡ ಹಾಕಿರುತ್ತಾರೆ. ಇದನ್ನೆಲ್ಲಾ ತೆಗೆಸುವುದು ಒಳ್ಳೆಯ ನಿರ್ಧಾರವಲ್ಲ ಎಂದರು.
Key words: Caste census, R. Ashok, allegations, DCM, DK Shivakumar