ಬೆಂಗಳೂರು,ಜನವರಿ,16,2025 (www.justkannada.in): ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸಿ ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಾಧ್ಯಮದ ಮೂಲಕ ಪಕ್ಷದಲ್ಲಿ ಹುದ್ದೆ ಕೇಳ್ತಾರಾ..? ಸ್ಥಾನ ಸಿಗಬೇಕು ಅಂದರೆ ಮೀಡಿಯಾದಲ್ಲಿ ಕೊಡ್ತಾರಾ? ಮೀಡಿಯಾದಲ್ಲಿ ಅಂಗಡಿಯಲ್ಲಿ ಎಲ್ಲೂ ಸ್ಥಾನ ಸಿಗಲ್ಲ ನಮ್ಮ ಕೆಲಸ ಗುರುತಿಸಿ ಹುದ್ದೆ ಕೊಡುತ್ತಾರೆ. ಕೆಲಸ ಮಾಡುವ ಆಧಾರದ ಮೇಲೆ ಸ್ಥಾನ ನಿರ್ಧಾರವಾಗುತ್ತದೆ ಎಂದು ಟಾಂಗ್ ಕೊಟ್ಟರು.
ಅಂಗಡಿಯಲ್ಲೋ ಮಾಧ್ಯಮದಲ್ಲೋ ಸ್ಥಾನ ಸಿಗುತ್ತಾ? ಮೀಡಿಯಾ ಮೂಲಕ ಯಾರಾದರೂ ಪಾರ್ಟಿಯ ಹುದ್ದೆ ಕೇಳ್ತಾರಾ? ಇದನ್ನೆಲ್ಲಾ ನಾನು ಹೊಸದಾಗಿ ನೋಡುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.
Key words: DCM, DK Shivakumar, Minister, Satish Jarkiholi