ಬೆಳಗಾವಿ,ಜನವರಿ,18,2025 (www.justkannada.in): ಮುಡಾ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಇದು ಸಿಎಂ ಮೇಲೆ ರಾಜಕೀಯವಾಗಿ ನಡೆದ ಪಿತೂರಿ ಎಂದರು.
ಬೆಳಗಾವಿಯಲ್ಲಿ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಇನ್ವೆಸ್ಟಿಗೇಷನ್ ಅದು ಲಾಂಗ್ ಪ್ರೋಸಸ್ . ಅದು ಕೋರ್ಟ್ ಟ್ರಯಲ್ ಮಾಡೋದು. ಅದನ್ನ ನಾನು ನೀನು ಟ್ರಯಲ್ ಮಾಡೋದಲ್ಲ. ನಾನೂ ಇಡಿ ಕೇಸ್ ನಲ್ಲಿ ದಿನ ಬೆಳ್ಳಗೆ ಬಡಿದಾಡ್ತಿರೋನು. ನಾನು ಅದರ ಬಗ್ಗೆ ಹೆಚ್ಚಿಗೆ ಮಾತನಾಡು ಹೋಗಲ್ಲ. ಇದು ಸಿಎಂ ಮೇಲೆ ರಾಜಕೀಯವಾಗಿ ನಡೆದ ಪಿತೂರಿ. ಆ ಹೆಣ್ಣು ಮಗಳಾಗಲಿ ಅಥವಾ ಸಿಎಂ ಆಗಲಿ ಯಾವುದೇ ತಪ್ಪು ಮಾಡಿಲ್ಲ. ಈ ಹಿಂದೆಯೇ ಅವರು ಅದನ್ನ ಸ್ಪಷ್ಟಪಡಿಸಿದ್ದಾರೆ. ಆ ವಿಚಾರ ಬಿಡೋಣ ರಾಜ್ಯದ ವಿಚಾರ ಚರ್ಚೆ ಮಾಡೋಣ ಎಂದರು.
ನಾನು ಉಸ್ತುವಾರಿ ಇರೋವರೆಗೂ ಡಿಕೆಶಿಗೆ ಬೆಳಗಾವಿಗೆ ಬರಲು ಬಿಟ್ಟಿರಲಿಲ್ಲ ಎಂಬ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೇ ನೀಡಿದೆ ಡಿಕೆ ಶಿವಕುಮಾರ್ ತೆರಳಿದರು.
Key words: ED, Muda, Conspiracy, against, CM, DCM DK Shivakumar