ಬಾಗಲಕೋಟೆ,ಫೆಬ್ರವರಿ,12,2021(www.justkannada.in): ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನದ ತಿರುವು ರಸ್ತೆಗೆ ಸಿಮೆಂಟ್ ಕಾಂಕ್ರೆಟ್ ರಸ್ತೆ ನಿರ್ಮಾಣ ಹಾಗೂ ವಿದ್ಯುದ್ದೀಕರಣ ಕಾಮಗಾರಿಗೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಶುಕ್ರವಾರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ತಹಶೀಲ್ದಾರ ಸುಹಾಸ್ ಇಂಗಳೆ, ಪಿಡಬ್ಲೂಡಿ ಇಇ ಪ್ರಶಾಂತ ಸೇರಿದಂತೆ ಇತರರು ಉಪಸ್ಥಿತಿತರಿದ್ದರು.

ಒಟ್ಟು 3.19 ಕೋಟಿ ರೂ.ಗಳ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, 7 ಮೀಟರ ಅಗಲದ 700 ಮೀಟರ್ ಉದ್ದದ ಸಿ.ಸಿ ರಸ್ತೆ ಹಾಗೂ ಬಾಕ್ಸ ಕಲವರ್ಟ ನಿರ್ಮಾಣ, ಅಗಲೀಕರಣ ಒಳಗೊಂಡಿದೆ.
Key words: DCM- Govinda Karajola- CC road –project- worth Rs 3.19 crore-former cm- siddaramaiah