ಬೆಂಗಳೂರು,ಜನವರಿ,28,2021(www.justkannada.in): ಪರಿಸರ ಸ್ನೇಹಿ ಸಾರಿಗೆ ಸಂಸ್ಥೆ ಯೋಜನೆಗೆ ಚಾಲನೆ ನೀಡಲು ದಿನಾಂಕ ನಿಗದಿ ಪಡುವಂತೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಗೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಮನವಿ ಸಲ್ಲಿಸಿದರು.
ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನ ಭೇಟಿಯಾದ ತಾರಾ ಅನುರಾಧ ಅವರು, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ತಮ್ಮ ಸಲಹೆಯಂತೆ ಹಲವಾರು ಅಭಿವೃದ್ಧಿ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನಿಗಮದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ.
ದೇಶದ ರಾಜಧಾನಿ ದೆಹಲಿ ಇದೀಗ ವಾಯು ಮಾಲಿನ್ಯದಿಂದಾಗಿ ಜನಜೀವನ ಕಷ್ಟ ಎಂಬಂತಹ ಸ್ಥಿತಿಗೆ ಬಂದಿದೆ. ವಾಯುಮಾಲಿನ್ಯದಿಂದಾಗುವ ದುಷ್ಪರಿಣಾಮಗಳಿಂದಾಗಿ ಜನರು ಹೊರಗೆ ಬರಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ , ‘ಒಂದು ವಾಹನಕ್ಕೆ ಒಂದು ಗಿಡ’ ಎಂಬ ದ್ಯೇಯದೊಂದಿಗೆ ತಮ್ಮ ನೇತೃತ್ವದಲ್ಲಿ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಬಸ್ ನಿಲ್ದಾಣ, ಬಸ್ ಘಟಕ, ತರಬೇತಿ ಕೇಂದ್ರ ಇತರೇ ಎಲ್ಲಾ ಸಾರಿಗೆ ಕಚೇರಿಗಳ ಆವರಣದಲ್ಲಿ ಗಿಡ ಬೆಳೆಸುವ ಮೂಲಕ ವಾಯು ಮಾಲಿನ್ಯ ನಿಯಂತ್ರಿಸಲು ಹಾಗೂ ಪರಿಸರ ಸ್ನೇಹಿ ಸಾರಿಗೆ ಇಲಾಖೆಯನ್ನಾಗಿಸುವ ನಿಗಮ ಉದ್ದೇಶಿಸಲಾಗಿದ್ದು, ಇದಕ್ಕೆ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಹಾಗೆಯೇ ಬೆಂಗಳೂರಿನ ಕೇಂದ್ರ ಕಛೇರಿ ಅಥವಾ ತಾವು ತಿಳಿಸಿದ ಸ್ಥಳದಲ್ಲಿ ಯೋಜನೆಗೆ ಚಾಲನೆ ನೀಡಲು ದಿನಾಂಕ ನಿಗದಿ ಪಡಿಸಿ ತಿಳಿಸುವಂತೆ ತಾರಾ ಅನುರಾಧ ಅವರು ಡಿಸಿಎಂ ಲಕ್ಷ್ಮಣ್ ಸವದಿಗೆ ಮನವಿ ಮಾಡಿದ್ದಾರೆ.
Key words: DCM- Laxman Sawadi -set date – implementation – environment friendly transport –agency- project-thara anuradha