ಬೆಂಗಳೂರು,ಜ,1,2020(www.justkannada.in): ಡಿಸಿಎಂ ಹುದ್ದೆ ಸಂಬಂಧ ಶಾಸಕರಿಂದ ಸಹಿ ಸಂಗ್ರಹ ವಿಚಾರ ಕುರಿತು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿರುವ ಶಾಸಕ ಎಂಪಿ ರೇಣುಕಾಚಾರ್ಯ ಶಾಸಕರಿಂದ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಲಕ್ಷ್ಮಣ್ ಸವದಿ, ರೇಣುಕಾಚಾರ್ಯ ಸಹಿ ಸಂಗ್ರಹದ ಬಗ್ಗೆ ಗೊತ್ತಿಲ್ಲ .ಇದರ ಬಗ್ಗೆ ಹಾದಿಬೀದಿಯುಲ್ಲಿ ಚರ್ಚಿಸಲ್ಲ ಎಂದು ಟಾಂಗ್ ನೀಡಿದ್ದಾರೆ.
ಡಿಸಿಎಂ ಹುದ್ದೆ ವಿಚಾರ ಕುರಿತು ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಲಾಗುತ್ತದೆ. ಡಿಸಿಎಂ ಹುದ್ದೆ ಬಗ್ಗೆ ನಾನು ಎಲ್ಲಿಯೂ ಬಹಿರಂಗವಾಗಿ ಮಾತನಾಡುವುದಿಲ್ಲ ಎಂದು ಹೇಳಿದ ಡಿಸಿಎಂ ಲಕ್ಷ್ಮಣ್ ಸವದಿ, ಕಾಲ ಬಂದಾಗ ವಿಧಾನಪರಿಷತ್ ಗೆ ಆಯ್ಕೆಯಾಗುತ್ತದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಗಡಿಭಾಗದ ಕನ್ನಡಿಗರಿಗೆ ಜನರಿಗೆ ತೊಂದರೆಯಾದ್ರೆ ಸಹಿಸಲ್ಲ. …
ಗಡಿ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ್ ಸವದಿ, ಉದ್ದವ್ ಠಾಕ್ರೆ ಹೇಳಿಕೆಯನ್ನ ಖಂಡಿಸುತ್ತೇನೆ. ಉದ್ದವ್ ಠಾಕ್ರೆ ಹೇಳಿಕೆ ಈಗ ಅನಗತ್ಯ. ಕರ್ನಾಟಕದ ಗಡಿಭಾಗದ ಜನರ ಜತೆ ನಾವಿದ್ದೇವೆ. ಗಡಿಭಾಗದ ಕನ್ನಡಿಗರಿಗೆ ಜನರಿಗೆ ತೊಂದರೆಯಾದ್ರೆ ಸಹಿಸಲ್ಲ ಎಂದು ಎಚ್ಚರಿಕೆ ಈಡಿದರು.
ಮಹಾರಾಷ್ಟ್ರ- ಕರ್ನಾಟಕ ಗಡಿ ಬಗ್ಗೆ ಈ ಹಿಂದೆ ಉದ್ದವ್ ಠಾಕ್ರೆ ಏನು ಹೇಳಿದ್ರು ಅಂತಾ ನೆನಪಿಸಿಕೊಳ್ಳಲಿ. ಈಗ ಜನರಿಗೆ ತೊಂದರೆಯಾಗುವಂತಹ ಹೇಳಿಕೆ ನೀಡಿದ್ದಾರೆ. ಕಾರ್ಯಕರ್ತರನ್ನ ಪ್ರಚೋದಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಲಕ್ಷ್ಮಣ್ ಸವದಿ ಕಿಡಿಕಾರಿದರು.
key words: DCM – Laxman Sawadi –Tong-mla- MP Renukacharya