ಹಾಲಿನ ದರ ಏರಿಕೆ ಸಮರ್ಥಿಸಿಕೊಂಡ ಡಿಸಿಎಂ ಡಿಕೆ ಶಿವಕುಮಾರ್

ದಕ್ಷಿಣ ಕನ್ನಡ, ಜೂನ್,25,2024 (www.justkannada.in): ಹಾಲಿನ ದರ ಹೆಚ್ಚಳ ಮಾಡಬೇಕೆಂದು ರೈತರ ಒತ್ತಡವಿತ್ತು. ಹೀಗಾಗಿ ರೈತರ ಒತ್ತಾಯದ ಮೇಲೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಡಿಸಿಎಂ  ಡಿಕೆ ಶಿವಕುಮಾರ್ ಹಾಲಿನ ದರ ಏರಿಕೆಯನ್ನ ಸಮರ್ಥಿಸಿಕೊಂಡರು.

ಈ ಕುರಿತು ಇಂದು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ನೀರಿನ ಬೆಲೆಯು ಲೀಟರ್ ಗೆ 25 ರೂಪಾಯಿ ಆಗಿದೆ. ಹಾಲಿನ ಬೆಲೆ  ಹೆಚ್ಚು ಮಾಡಬೇಕೆಂದು ರೈತರ ಒತ್ತಡವಿತ್ತು. ಹಾಗಾಗಿ ರೈತರ ಒತ್ತಾಯದಿಂದಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಕೆಎಂಎ‍ಫ್ ಹಾಲಿನ ದರವನ್ನ 2 ರೂ ಹೆಚ್ಚಳ ಮಾಡಿದೆ. ಹಾಲಿನ ಪ್ರಮಾಣವನ್ನ ಹೆಚ್ಚಿಸುವುದರ ಜೊತೆಗೆ ದರವನ್ನೂ ಏರಿಸಿದೆ. ಒಂದು ಲೀಟರ್ ಬದಲಿಗೆ 1050 ಎಂಎಲ್​ ನ ಪ್ಯಾಕೆಟ್ ಹಾಲು​ ಸಿಗಲಿದೆ.  50 ಎಂಲ್​ ಹಾಲಿನ ಪ್ಯಾಕೆಟ್​ಗೆ 2 ರೂಪಾಯಿ ದರ ಏರಿಸಲಾಗಿದೆ.

Key words: DCM,DK Shivakumar, increase, milk price