ಹರಕೆ ಗೂಳಿ ಸಾವು:  ಮರುಗಿದ ಜನತೆ: ಸಾಂಪ್ರದಾಯಿಕ ಅಂತ್ಯ ಸಂಸ್ಕಾರ.

ಮೈಸೂರು,ಏಪ್ರಿಲ್,18,2025 (www.justkannada.in): ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಹರಕೆ ಗೂಳಿ ಸಾವನ್ನಪ್ಪಿದ್ದು ಗೂಳಿಯ ಸಾವಿಗೆ ಮರುಗಿದ ಜನತೆ ಸಾಂಪ್ರದಾಯಿಕವಾಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ನಂಜುಂಡಪ್ಪನ ಗೂಳಿ ಅಂತಲೇ ಪ್ರಸಿದ್ದಿಯಾಗಿದ್ದ ಹೋರಿ ಪ್ಲಾಸ್ಟಿಕ್ ಸಹಿತ ಬಿಸಾಡಿದ ಪ್ರಸಾದ ತಿಂದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪ್ರತಿ ನಿತ್ಯ ಅಂಗಡಿ ಮನೆಗಳಿಗೆ ತೆರಳುತ್ತಿದ್ದ ನಂಜುಂಡಪ್ಪನ ಗೂಳಿಗೆ ಜನರು ಹಣ್ಣು, ಬೆಲ್ಲ, ನೀರು, ತರಕಾರಿ ನೀಡುತ್ತಿದ್ದರು.

ಇದೀಗ ನಂಜುಂಡಪ್ಪನ ಗೂಳಿ ಸಾವನ್ನಪ್ಪಿದ್ದು, ಕಪಿಲಾ ನದಿ ತೀರದಲ್ಲಿ ನಂಜನಗೂಡು ಯುವ ಬ್ರಿಗೇಡ್ ಹಾಗೂ ಸಾರ್ವಜನಿಕರಿಂದ ಹರಕೆ ಗೂಳಿಯ  ಅಂತ್ಯ ಸಂಸ್ಕಾರ ಸಾಂಪ್ರದಾಯಿಕವಾಗಿ ನೆರವೇರಿತು.

Key words: Death, bull,  People, Traditional funeral, Mysore