ಮೈಸೂರು,ಏಪ್ರಿಲ್,18,2025 (www.justkannada.in): ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಯುವಕ ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ನಿವಾಸಿ ಮನ್ಸೂರ್ (19) ಮೃತಪಟ್ಟ ಯುವಕ. ಚಿಕನ್ ಅನ್ ಲೋಡ್ ಮಾಡಲು 8 ಜನರು ಬಂದಿದ್ದರು. ಈ ನಡುವೆ ಬನ್ನೂರು ಬಳಿ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಕೂಲಿ ಕಾರ್ಮಿಕರು ತೆರಳಿದ್ದರು.
ಈ ಮಧ್ಯೆ ನೀರಿನ ರಭಸಕ್ಕೆ ನದಿಯಲ್ಲಿ ಮುಳುಗಿ ಮನ್ಸೂರು ಸಾವನ್ನಪ್ಪಿದ್ದಾನೆ. ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Key words: Mysore, young man death, Cauvery River, drowned.