ಬೆಂಗಳೂರು,ಮಾ,13,2020(www.justkannada.in): ಕೊರೋನಾ ವೈರಸ್ ನಿಂದ ಕಲ್ಬುರ್ಗಿ ಜಿಲ್ಲೆಯ ವೃದ್ಧ ಮೃತಪಟ್ಟ ಹಿನ್ನೆಲೆ, ಇದು ಸರ್ಕಾರದ ನಿರ್ಲಕ್ಷ್ಯ ಎಂದು ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ರೋಗಿ ವೃದ್ಧನ ಮನವೊಲಿಸಿ ಅಗತ್ಯ ಚಿಕಿತ್ಸೆ ವ್ಯವಸ್ಥೆ ಮಾಡುವಲ್ಲಿ ಆರೋಗ್ಯ ಅಧಿಕಾರಿಗಳು ವಿಫಲರಾಗಿದ್ದಾರೆ. ವೃದ್ದನನ್ನ ಹೈದರಾಬಾದ್ ಗೆ ಕರೆದೊಯ್ಯಲಾಗಿದೆ.ಬಳಿಕ ಅಲ್ಲಿ ಐದಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿಲ್ಲ. ಬಳಿಕ ವಾಪಸ್ ಬರುವಾಗ ಹುಮ್ನಾಬಾದ್ ಬಳಿ ವೃದ್ಧ ಸಾವನ್ನಪ್ಪಿದ್ದಾರೆ. ಏರ್ಪೋರ್ಟ್ ನಲ್ಲಿ ಬರುವಾಗಲೂ ಸ್ಕ್ರೀನಿಂಗ್ ಸಹ ಮಾಡಿಲ್ಲ. ಏರ್ ಪೋರ್ಟ್ ಗಳು ಇರುವಲ್ಲಿ ಪ್ರಯೋಗಾಲಯಗಳನ್ನ ಪ್ರಾರಂಭಿಸಬೇಕು ಏಕೆ ಪ್ರಯೋಗಾಲಯ ಪ್ರಾರಂಭಿಸಿಲ್ಲ. ಇದು ಸರ್ಕಾರದ ವೈಪಲ್ಯ ಎಂದು ಟೀಕಿಸಿದರು.
ಇದಕ್ಕೂ ಮೊದಲು ವಿಧಾನಸೌಧದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ವೃದ್ಧನ ಸಾವಿನಿಂದ ರಾಜ್ಯದಲ್ಲಿ ಆತಂಕ ಮನೆ ಮಾಡಿದೆ. ಆದ್ರೆ ಸರ್ಕಾರ ಮಾತ್ರ ಸರಿಯಾದ ಮಾಹಿತಿ ಕೊಟ್ಟಿಲ್ಲ ಕೊರೋನಾ ಸೋಂಕು ಶಂಕೆ ಹಿನ್ನೆಲೆ, ಸರ್ಕಾರ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಬೇಕು. ಆದರೆ ಆರೋಗ್ಯ ವೈದ್ಯಕೀಯ ಸಚಿವರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ರಾಜ್ಯದಲ್ಲಿ ಕೊರೋನಾ ಸಂಬಂಧ ಲ್ಯಾಬ್ ತೆರೆಯಬೇಕು ಎಂದು ಆಗ್ರಹಿಸಿದರು.
ಕೊರೋನಾ ವೈರಸ್ ಸಂಬಂಧ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾಣುತ್ತಿದೆ. ಸಿದ್ಧರಾಮಯ್ಯ. ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಅಧಿಕಾರಿಗಳ ಜತೆಯೂ ಸಭೆ ಮಾಡಿದಂತೆ ಕಾಣುತ್ತಿಲ್ಲ. ವೈದ್ಯರ ಜತೆ ನಿರಂತರ ಸಂಪರ್ಕದಲ್ಲಿ ಇದ್ದಂತೆ ಕಾಣುತ್ತಿಲ್ಲ ಎಂದು ಸಚಿವರಾ ಶ್ರೀರಾಮುಲು, ಸುಧಾಕರ್ ವಿರುದ್ದ ಸಿದ್ದರಾಮಯ್ಯ ಆರೋಪ ಮಾಡಿದರು.
Key words: death – Corona virus-kalburgi- person-Former CM –Siddaramaiah- criticize- government’s -failure.