ಕುಡಿಯುವ ನೀರು ಎಂದು ಭಾವಿಸಿ ಸೀಮೆಎಣ್ಣೆ ಕುಡಿದಿದ್ದ ಬಾಲಕಿ ಸಾವು…

ಚಾಮರಾಜನಗರ,ಮೇ,1,2019(www.justkannada.in): ಕುಡಿಯುವ ನೀರು ಎಂದು ಭಾವಿಸಿ ಸೀಮೆಮೆಣ್ಣೆ ಕುಡಿದಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದ ಬೇಡರಪುರದಲ್ಲಿ ಈ ಘಟನೆ ನಡೆದಿದೆ. ರಕ್ಷಿತಾ (3) ಮೃತಪಟ್ಟ ಬಾಲಕಿ. ಕೊಂಡೋತ್ಸವ ಅಂಗವಾಗಿ ಮೈಸೂರಿನಿಂದ ಅಜ್ಜಿ ಮನೆಗೆ  ತೆರಳಿದ್ದ ರಕ್ಷಿತಾ ಆಟವಾಡುವ ವೇಳೆ ಧಣಿವಾದಾಗ  ನೀರೆಂದು ಭಾವಿಸಿ ಬಾಟಲ್ ನಲ್ಲಿದ್ದ ಸೀಮೆಣ್ಣೆಯನ್ನ ಕುಡಿದಿದ್ದಳು.

ಚಿಕಿತ್ಸೆಗಾಗಿ ಬಾಲಕಿ ರಕ್ಷಿತಾಳನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಕ್ಷಿತಾ ಸಾವನ್ನಪ್ಪಿದ್ದಾಳೆ. ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  death -girl – drinking – Kerosene -drinking