ಮೈಸೂರು,ಜುಲೈ,6,2021(www.justkannada.in): ಕೈಗಾರಿಕೋದ್ಯಮಿ ಹಾಗೂ ಶಿಕ್ಷಣ ಸಂಸ್ಥೆಗಳನ್ನ ನಡೆಸುತ್ತಿದ್ದ ಆರ್ ವಾಸುದೇವಮೂರ್ತಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಆರ್ ವಾಸುದೇವಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್, ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಆರ್ ವಾಸುದೇವಮೂರ್ತಿ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ.
ಶ್ರೀಯುತರು ಕೈಗಾರಿಕೋದ್ಯಮಿ ಗಳಾಗಿ ಅತಿವೃಷ್ಟಿ, ಅನಾವೃಷ್ಟಿಯ ಸಂಕಷ್ಟ ಕಾಲದಲ್ಲಿ ಸಹಾಯದ ಹಸ್ತ ನೀಡಿ ಮಾನವೀಯತೆಯನ್ನು ಮೆರೆದವರು. ತಮ್ಮ ಕೊನೆ ಉಸಿರು ಇರುವ ತನಕ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯಾದರೂ ಬಡಮಕ್ಕಳಿಗೆ ಉದಾರವಾಗಿ ಉಚಿತ ಶಿಕ್ಷಣ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ದುಡಿದಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯು ಜಯಲಕ್ಷ್ಮಿಪುರಂ ನಲ್ಲಿ ಯಾವುದಾದರೂ ರಸ್ತೆಗೆ ಅವರ ಹೆಸರಿಡುವುದರ ಮೂಲಕ ಅವರ ಸೇವೆಯನ್ನು ಸ್ಮರಿಸಬೇಕು ಎಂದು ವಿನಂತಿಸುತ್ತೇನೆ ಎಂದಿದ್ದಾರೆ.
ಕ್ರೆಡಿಟ್ – ಐ ಸಂಸ್ಥೆಯ ಡಾ. ಎಂ. ಪಿ. ವರ್ಷ ಅವರು ಸಹ ಆರ್ ವಾಸುದೇವಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದಿವಂಗತ ಆರ್. ವಾಸುದೇವ ಮೂರ್ತಿಯವರು ನನ್ನ ವಿದ್ಯಾರ್ಥಿ ಬದುಕಿನ ಅಡಿಪಾಯ .. ಅಂದು 1986 ರಲ್ಲಿ high-school ವಿದ್ಯಾಭ್ಯಾಸಕ್ಕಾಗಿ ಮಹಾಜನ ಶಾಲೆಗೆ ಸೇರಿದ್ದ ನಾನು ಶಾಲೆಯವರು ಕೇಳಿದ್ದ Rs.340/- fees ಕಟ್ಟಲಾಗದೆ ಓದು ನಿಲ್ಲಿಸುವ ಸ್ಥಿತಿ ಬಂದಿತ್ತು. ಆಗ ಮೂರ್ತಿಯವರು ನನ್ನ school fees ಅನ್ನು Rs. 340 ಇಂದ Rs.120 ಕ್ಕೆ ಕಡಿಮೆ ಮಾಡಿ ನನ್ನ ವಿದ್ಯಾಭ್ಯಾಸ ಮುಂದುವರಿಸಲು ನೆರವಾಗಿದ್ದರು. ಇದನ್ನು 26 ವರ್ಷಗಳ ನಂತರ ಕಲಾಮಂದಿರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಮೂರ್ತಿಯವರು ಹಾಗೂ ನಾನು ಗೆಸ್ಟ್ ಆಗಿ ಒಂದೇ ವೇದಿಕೆಯಲ್ಲಿದ್ದ ಸಂದರ್ಭದಲ್ಲಿ ನನ್ನ ಭಾಷಣದ ವೇಳೆ ತಿಳಿಸಿ ಕೃತಜ್ಞತೆ ಅರ್ಪಿಸಿದಾಗ ಅವರ ಕಣ್ಣು ಒದ್ದೆಯಾಗಿತ್ತು .ವಾಸುದೇವ ಮೂರ್ತಿ ಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Key words: death – industrialist -R Vasudevamurthy- Condolences