ಕೋಲಾರ,ಮಾರ್ಚ್,3,2021(www.justkannada.in): ಅತ್ತೆ ಮನೆಯವರ ಕಾಟಕ್ಕೆ ಮನನೊಂದು ತಾಯಿ ಮಗಳು ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕಿನ ನರಸಾಪುರ ಕೆರೆಯಲ್ಲಿ ಬಿದ್ದು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ನಂದಿತಾ (42), ಮಗಳು ಪ್ರಗತಿ(21) ಮೃತ ದುರ್ದೈವಿಗಳು. 13 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಾಯಿ ಮಗಳು ಬೆಂಗಳೂರಿನ ಹೊರಮಾವು ಮೂಲದವರು ಎನ್ನಲಾಗಿದ್ದು ಕಳೆದ ನವೆಂಬರ್ ನಲ್ಲಿ ನಂದಿತಾ ಪತಿ ಮೂರ್ತಿ ಸಾವನ್ನಪ್ಪಿದ್ದರು. ಸಾವಿನ ನಂತರ ಅತ್ತೆ ಮನೆಯವರು ಹಣಕ್ಕಾಗಿ ಕಾಟ ನೀಡುತ್ತಿದ್ದರು. ಮನೆ ಬಿಟ್ಟು ಹೋಗುವಂತೆ ಕಾಟ ಕೊಡುತ್ತಿದ್ದರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಕುರಿತು ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Key words: Death Note- mother- daughter- suicide -kolar