ಮೈಸೂರು, ನವೆಂಬರ್ 17, 2019 (www.justkannada.in): ಮೈಸೂರಿನ ಲಿಂಗಾಬುದಿ ಕೆರೆಯಲ್ಲಿ 15ಕ್ಕೂ ಹೆಚ್ಚು ಪಕ್ಷಿಗಳು ಸಾವಿಗೀಡಾಗಿವೆ.
ಉತ್ತರ ಭಾರತ ಹಾಗು ವಿದೇಶದಿಂದ ಮೈಸೂರಿಗೆ ವಲಸೆ ಬಂದಿದ್ದ ಪಕ್ಷಿಗಳು ಸಾವನ್ನಪ್ಪಿವೆ. ಚಳಿಯಿಂದ ರಕ್ಷಣೆ ಹಾಗು ಸಂತಾನೋತ್ಪತ್ತಿಗಾಗಿ ಬಂದಿದ್ದ ಪಕ್ಷಿಗಳು ಸಾವನ್ನಪ್ಪಿವೆ.
ಇತ್ತೀಚೆಗೆ ಕುಕ್ಕರಹಳ್ಳಿ ಕೆರೆಯಲ್ಲಿ ಮೂರು ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ್ದವು. ಇದೀಗ ಲಿಂಗಾಬುದಿ ಕೆರೆಯಲ್ಲಿ ಪಕ್ಷಿಗಳು ಸಾವನ್ನಪ್ಪಿರುವುದು ಆತಂಕ್ಕೀಡು ಮಾಡಿದೆ.
ಮಾರಕ ರೋಗದಿಂದ ಪಕ್ಷಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಬೇಕಾಗಿದೆ.