ಚಾಮರಾಜನಗರ,ಮೇ,3,2021(www.justkannada.in): ಚಾಮರಾಜನಗರ ಜಿಲ್ಲೆಯಲ್ಲಿ ಅಕ್ಸಿಜನ್ ದುರಂತದಿಂದ 24 ಜನ ಸಾವು ಪ್ರಕರಣ ಸಂಬಂಧ ಹನೂರು ಶಾಸಕ ನರೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಅಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದು 24 ಮಂದಿ ಅಲ್ಲ ಅದಕ್ಕಿಂತ ಜಾಸ್ತಿ ಜನ ಸಾವನ್ನಪ್ಪಿದ್ದಾರೆ ಎಂದು ಹನೂರು ಶಾಸಕ ನರೇಂದ್ರ ಗಂಭೀರ ಆರೋಪ ಮಾಡಿದ್ದು ಇವರ ಆರೋಪಕ್ಕೆ ಡಿಸಿ ರವಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಡಿಸಿಯನ್ನು ಶಾಸಕರಾದ ನರೇಂದ್ರ, ಪುಟ್ಟರಂಗಶೆಟ್ಟಿ ತರಾಟೆ ತೆಗೆದುಕೊಂಡಿದ್ದಾರೆ.
ಸಾವಿನ ಅಂಕಿ ಅಂಶದಲ್ಲೂ ವ್ಯತ್ಯಾಸವಿದೆ. ಇಡೀ ಜಿಲ್ಲೆಯ ಅಂಕಿ ಅಂಶ ಕೊಟ್ಟಿಲ್ಲ. ನನ್ನ ಹನೂರು ಕ್ಷೇತ್ರದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆಯಿಂದ ಮುಂಜಾನೆ ತನಕ ಕೋವಿಡ್ ಸಾವಿಗೀಡಾಗಿರೋ ಬಗ್ಗೆ ಮಾಹಿತಿ ಸರಿಯಾಗಿ ನೀಡಿಲ್ಲ ಎಂದು ನರೇಂದ್ರ ಕಿಡಿಕಾರಿದರು.
ಈ ನಡುವೆ ಸಚಿವರ ನಿರ್ಗಮನ ಬಳಿಕ ಮಾಹಿತಿ ಕೊಡಲು ಶಾಸಕರು ಮುಂದಾಗಿದ್ದು ಈ ವೇಳೆ ಶಾಸಕರ ಪತ್ರಿಕಾಗೋಷ್ಠಿಯನ್ನ ಡಿಸಿ ಎಂ.ಆರ್.ರವಿ ಮೊಟಕು ಮಾಡಿದರು. ಈ ಸಮಯದಲ್ಲಿ ಶಾಸಕರು ಮತ್ತು ಡಿಸಿ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಶಾಸಕರನ್ನೇ ಡಿಸಿ ನಿಯಂತ್ರಿಸಲು ಮುಂದಾಗಿದ್ದು ಈ ವೇಳೆ ಡಿಸಿ ವಿರುದ್ದ ಶಾಸಕರು ತಿರುಗಿಬಿದ್ದ ಪ್ರಸಂಗ ನಡೆಯಿತು.
Key words: death -oxygen -disaster – chamarajanagar-MLA-Narendra – serious accused.