ಕೋಲಾರ,ಏಪ್ರಿಲ್,10,2025 (www.justkannada.in): ಕೆರೆಯಲ್ಲಿ ಈಜಲು ಹೋಗಿ ತಂದೆ ಮಗ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಾಟರ್ ಮ್ಯಾನ್ ರಮೇಶ್(40), ಇವರ ಪುತ್ರ ಅಗಸ್ತ್ಯ(12), ಈತನ ಸ್ನೇಹಿತ ಶರಣ್(15) ಮೃತಪಟ್ಟವರು. ಮೂವರು ಕೆರೆಯಲ್ಲಿ ಬೂಡದಮಿಟ್ಟೆ ಕೆರೆಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದಾರೆ.
ಘಟನಾಸ್ಥಳಕ್ಕೆ ಕೆಜಿಎಫ್ ಎಸ್ ಪಿ ಶಾಂತ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Three deaths, father, son, swim, lake