ಮುಂಬೈ,ಮಾರ್ಚ್,14,2025 (www.justkannada.in): ಬಾಲಿವುಡ್ ಹಿರಿಯ ನಟ ದೇಬ್ ಮುಖರ್ಜಿ ಅವರು ಇಂದು ನಿಧನ ಹೊಂದಿದ್ದಾರೆ.
ಬಾಲಿವುಡ್ನ ಖ್ಯಾತ ಯುವ ನಿರ್ದೇಶಕ ಅಯಾನ್ ಮುಖರ್ಜಿಯ ತಂದೆ ದೇಬ್ ಮುಖರ್ಜಿ ಕೊನೆಯುಸಿರೆಳೆದಿದ್ದಾರೆ. ದೇಬ್ ಮುಖರ್ಜಿ ಅವರಿಗೆ 83 ವರ್ಷ ವಯಸ್ಸಾಗಿತ್ತು. 1965 ರಿಂದಲೂ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ದೇಬ್ ಮುಖರ್ಜಿ ನಟನೆಯ ಜೊತೆಗೆ ನಿರ್ಮಾಣದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ನೂರಾರು ಸಿನಿಮಾಗಳಲ್ಲಿ ನಟಿಸದಿದ್ದರೂ ಸಹ ನಟಿಸಿದ ಕಡಿಮೆ ಸಿನಿಮಾಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ
ದೇಬ್ ಮುಖರ್ಜಿ, ಬಾಲಿವುಡ್ ನ ಕಲ್ಟ್ ಕ್ಲಾಸಿಕ್ ಸಿನಿಮಾಗಳಾದ ‘ಅಭಿನೇತ್ರಿ’, ‘ಏಕ್ ಬಾರ್ ಮುಸ್ಕುರಾದೊ’, ‘ಆಸೂ ಬನ್ ಗಯೇ ಪೂಲ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2009 ರಲ್ಲಿ ಬಿಡುಗಡೆ ಆದ ಶಾಹಿದ್ ಕಪೂರ್ ನಟನೆಯ ‘ಕಮೀನೆ’ ಅವರ ಕೊನೆಯ ಸಿನಿಮಾ. ಅದಾದ ಬಳಿಕ ಅವರು ಸಿನಿಮಾ ರಂಗದಿಂದ ದೂರವೇ ಉಳಿದಿದ್ದರು.
Key words: Veteran ,Bollywood, actor, Deb Mukherjee, passes away