ಬೆಂಗಳೂರು,ನವೆಂಬರ್,25,2020(www.justkannada.in): ಮರಾಠ ಅಭಿವೃದ್ದಿ ನಿಗಮ ವಿರೋಧಿಸಿ ಡಿಸೆಂಬರ್ 5 ರಂದು ನೂರಕ್ಕೆ ನೂರರಷ್ಟು ಅಖಂಡ ಕರ್ನಾಟಕ ಬಂದ್ ಆಗುತ್ತದೆ. ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು.
ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಕುರಿತು ಗೊಂದಲ ಉಂಟಾಗಿತ್ತು. ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದರೇ ಹಲವು ಸಂಘಟನೆಗಳು ಬಂದ್ ಬೇಡ ಎನ್ನುತ್ತಿದ್ದವು. ಹೀಗಾಗಿ ಬಂದ್ ವಿಚಾರ ಕುರಿತು ಕನ್ನಡ ಒಕ್ಕೂಟದಲ್ಲಿ ಭಿನ್ನಾಭಿಪ್ರಾಯವಿರುವ ಬಗ್ಗೆ ಸುದ್ದಿಯಾಗಿತ್ತು.
ಇಂದು ಮತ್ತೆ ಕನ್ನಡಪರ ಹೊರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ಸೇರಿ ಡಿ.5 ರ ಬಂದ್ ಕುರಿತು ಚರ್ಚಿಸಲಾಗಿದೆ. ಸಭೆ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಬಂದ್ ವಿಫಲಗೊಳಿಸಲು ಸರ್ಕಾರ ಹರಸಾಹಸಪಡುತ್ತಿದೆ. ಆದರೆ ಡಿಸೆಂಬರ್ 5ರಂದು ನೂರಕ್ಕೆ ನೂರರಷ್ಟು ಕರ್ನಾಟಕ ಬಂದ್ ಮಾಡುತ್ತೇವೆ. ಅಂದು ಅಖಂಡ ಕರ್ನಾಟಕ ಬಂದ್ ಆಗುತ್ತದೆ. ಬಂದ್ ಗೆ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ದಲಿತ ಸಂಘಟನೆ ಅಧ್ಯಕ್ಷರು ಬೆಂಬಲ ಘೋಷಿಸಿದ್ದಾರೆ ಎಂದರು.
ಚುನಾವಣೆಗಾಗಿ ನಿಗಮ ಮಾಡಿದ್ದಾರೆ. ಇದರಿಂದ ಕರ್ನಾಟಕದಲ್ಲಿ 100 ರಿಂದ 200 ನಿಗಮಗಳನ್ನ ರಚಿಸಬೇಕಾಗುತ್ತದೆ. ಸಿಎಂ ಬಿಎಸ್ ವೈ ಯಾರನ್ನ ಕೇಳಿ ಈ ನಿಗಮ ರಚಿಸಿದ್ದಾರೆ ಎಂದು ಕಿಡಿಕಾರಿದ ವಾಟಾಳ್ ನಾಗರಾಜ್, ನವೆಂಬರ್ 30ರೊಳಗೆ ಮರಾಠ ಅಭಿವೃದ್ಧಿ ನಿಗಮ ವಾಪಸ್ ಪಡೆಯಿರಿ. ನ,30ರವರೆಗೆ ಗಡುವು ನೀಡಿದ್ದೇವೆ. ಮರಾಠ ನಿಗಮ ಕೈಬಿಡಿ. ಬೇಕಿದ್ರೆ ನಾವೂ ಕೂಡ ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಏನಾದ್ರೂ ಆನಾಹುತ ಆದ್ರೆ ಅದಕ್ಕೆ ನಾವು ಹೊಣೆ ಅಲ್ಲ ಎಂದರು.
English summary….
We will observe Karnataka bundh on Dec. 5 at any cost: Ready to go to jail, Vatal Nagaraj
Bengaluru, Nov. 25, 2020 (www.justkannada.in): “We will observe the state-wide bundh that has been called on December 5, opposing the State Government’s decision to establish the Maratha Development Corporation at any cost. We are ready to go to jail,” opined Kannada activist Vatal Nagaraj.
Vatal Nagaraj today said that the State Govt. is doing everything to stop the bundh. But we have pledged to observe state wide bundh at any cost. Many organisations are supporting us, he said, and warned that the government would be responsible for any untoward incidents.
keyword: Karnataka bundh December 5/ Vatal Nagaraj
Key words: Dec 5-karnataka bandh-kannada fighter-Vatal Nagaraj – ready – jail.