ಮೈಸೂರು,ಡಿಸೆಂಬರ್,20,2020(www.justkannada.in) : ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ‘ಕಲಾವಲೋಕನ ಹಾಗೂ ‘ಮನೆ’ ಮನಗಳ ಕಥೆ ಕೃತಿಗಳ ಲೋಕಾರ್ಪಣೆಯು ಡಿ.೩೦ರಂದು ಬೆಳಗ್ಗೆ ೧೦.೩೦ಕ್ಕೆ ವಿಜಯನಗರ ೧ನೇ ಹಂತದ ಜಿಲ್ಲಾ ಸಾಹಿತ್ಯ ಭವನದಲ್ಲಿ ನಡೆಯಲಿದೆ.ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ಜಿ.ಟಿ.ದೇವೇಗೌಡ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
‘ಕಲಾವಲೋಕನ’ಕುರಿತು ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಹಾಗೂ ‘ಮನೆ’ ಮನಗಳ ಕಥೆ ಕುರಿತು ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗೋವಿಂದರಾಜು ಲಕ್ಷ್ಮೀಪುರ ಮಾತನಾಡುವರು. ಮಹಿಮಾ ಪ್ರಕಾಶನದ ಶ್ರೀನಿವಾಸ್ ಉಪಸ್ಥಿತರಿರುವರು.
ಕೃತಿಗಳ ಕುರಿತು೩೫ ಅಧ್ಯಾಯಗಳಿರುವ ‘ಕಲಾವಲೋಕನ’ವು ನಾಟಕ, ಸಂಗೀತ, ನೃತ್ಯ ಮತ್ತು ಕಲಾ ವಿಮರ್ಶೆ ಕುರಿತದ್ದಾಗಿದೆ. ಪ್ರೊ.ಎಚ್.ಎಸ್.ಉಮೇಶ್ ಮುನ್ನುಡಿ ಬರೆದಿದ್ದಾರೆ. ೩೬ ಅಧ್ಯಾಯಗಳಿರುವ ‘ಮನೆ’ ಮನಗಳ ಕಥೆಯು ಪಾರಂಪರಿಕ, ಆಧುನಿಕ, ವಿಭಿನ್ನ ಶೈಲಿಯ ಮನೆಗಳು, ರಿಯಲ್ ಎಸ್ಟೇಟ್ ಉದ್ಯಮ ಕುರಿತ ಲೇಖನಗಳನ್ನು ಒಳಗೊಂಡಿದೆ. ಖ್ಯಾತ ವಾಸ್ತುಶಿಲ್ಪಿ ಡಾ.ಶಶಿಭೂಷಣ್ ಮುನ್ನುಡಿ ಬರೆದಿದ್ದಾರೆ. ಮಹಿಮಾ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ.
key words : December.೩೦-Journalist-Anmshi prasanna Kumar-Release-two-works