ಮೈಸೂರು,ಡಿಸೆಂಬರ್,08,(www.justkannada.in) : ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ‘ಕ್ರೀಡಾಪಟುಗಳ ಮಾನಸಿಕ ಸ್ಥಿತಿ ಕಾಪಾಡಿಕೊಳ್ಳುವ ಸಲುವಾಗಿ ಕ್ರೀಡಾ ಪ್ರದರ್ಶನ ನಿರ್ವಹಣೆಯಲ್ಲಿ ಕ್ರೀಡಾ ಮನೋವಿಜ್ಞಾನದ ಪಾತ್ರ ಎಂಬ ವಿಷಯದ ಕುರಿತು ಡಿ.9ರಂದು ವಿಚಾರ ಸಂಕಿರಣ ಏರ್ಪಡಿಸಲಾಗಿದೆ.ಈ ವಿಚಾರ ಸಂಕಿರಣವನ್ನು ಅಂತರಾಷ್ಟ್ರೀಯ ಮಟ್ಟದ ಈಜುಗಾರ್ತಿ ಶುಭ ಚಿತ್ತರಂಜನ್ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಲಿದ್ದಾರೆ.
ದೈಹಿಕ ಶಿಕ್ಷಣ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ತಿರುಮಲೈ ಗೋಪಾಲನ್, ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಜಿ.ವೆಂಕಟೇಶ್ ಕುಮಾರ್ ಭಾಗವಹಿಸಲಿದ್ದಾರೆ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಅಧ್ಯಕ್ಷತೆವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳ ತರಬೇತುದಾರರು, ಕ್ರೀಡಾಪಟುಗಳು, ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ಕಾಲೇಜಿನ ವಿದ್ಯಾರ್ಥಿಗಳು, ಆಸಕ್ತರು ಭಾಗವಹಿಸಲು ಅವಕಾಶವಿದೆ. ವಿಚಾರ ಸಂಕಿರಣದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು. ಆನ್ ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9164061662, 9972045254, 8553688356, 9743912557 ಸಂಪರ್ಸಿಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
English summary….
Seminar by MU Physical Education Department on Dec.9
Mysuru, Dec. 8, 2020 (www.justkannada.in): The Physical Education Department of Mysore University has organised a seminar on the topic “Role of Sport Psychology in Management of Sports Events to protect Mental Condition of Atheletes,” on December 9. Shubha Chittaranjan, International Swimmer conduct the seminar, that will be inaugurated by Prof. G. Hemanth Kumar, Vice-Chancellor, Mysore University.
Sri Tirumalai Gopalan, Retd. Professor, Physical Education Department, Sri G. Venkatesh Kumar, Professor, Psychology Department will participate. Dr. P. Krishnaiah, Director, Physical Education Department, Mysore University will preside.
Various sports trainers, athletes, psychology department students, Physical Education College students, and other interested persons can participate. All the participants will be given certificates. Interested people can register through online. For details contact 9164061662, 9972045254, 8553688356, 9743912557.
key words : December.9-Seminar-Mysore VV-Physical- Education-Division