ಮೈಸೂರು,ಸೆಪ್ಟಂಬರ್,18,2021(www.justkannada.in): ಮೈಸೂರಿನಲ್ಲಿ 300 ಸಿಎ ನಿವೇಶಗಳನ್ನು ಹಂಚಿಕೆ ಮಾಡಲು ಮುಂದಾಗಿದ್ದೇವೆ. ಇದಕ್ಕೆ ಸೆಪ್ಟಂವರ್ 25 ರಿಂದ ಅಕ್ಟೋಬರ್ 30 ರೊಳಗೆ ಅರ್ಜಿಸಲ್ಲಿಸಲು ಅವಕಾಶವಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು.
300ಕ್ಕೂ ಅಧಿಕ ನಿವೇಶನಗಳ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆ ಮಾಡಿದ ಹಿನ್ನೆಲೆ ಈ ಕುರಿತು ಇಂದು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮೂಡಾ ಅಧ್ಯಕ್ಷ ಎಚ್.ವಿ.ರಾಜೀವ್ , 188 ಸಿಎ ನಿವೇಶನಗಳನ್ನು ರದ್ದು ಮಾಡಲಾಗಿದೆ. ನಾವು ತಿಳಿಸುವ ನಿಯಮಗಳನ್ನು ಪಾಲಿಸದ ಹಿನ್ನಲೆ 188 ಸಿಎ ನಿವೇಶನಗಳನ್ನು ರದ್ದು ಮಾಡಲಾಗಿದೆ. ಆದ್ದರಿಂದ ಈ ನಾವು ಹಂಚಿಕೆ ಮಾಡುವ ಸಿಎ ನಿವೇಶಗಳ ಬಗ್ಗೆ ಸಾರ್ವಜನಿಕರಗೆ ಮಾಹಿತಿ ನೀಡಲಾಗುತ್ತಿದೆ. 300 ಸಿಎ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿದ್ದೇವೆ. ಸಿಎ ನಿವೇಶನಗಳ ಹಂಚಿಕೆಗೆ ನಿಗಧಿತ ಅರ್ಜಿ ನಮೂನೆಯಲ್ಲಿ ಅರ್ಜಿ ಹಾಕಬೇಕು. ಸಾವಿರ ರೂ. ಪಾವತಿ ಮಾಡಿ ಅರ್ಜಿ ಪಡೆಯಬೇಕು. ಅರ್ಹ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪ್ರಾಧಿಕಾರದಲ್ಲಿ ಸೆಪ್ಟಂಬರ್ 23 ರಿಂದ ಅಕ್ಟೋಬರ್ 10 ವರೆಗೆ ಪಡೆಯಬಹುದು. ಪಡೆದ ಅರ್ಜಿಯನ್ನು ಸೆ.25 ರಿಂದ ಅ.30 ರೊಳಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು ಎಂದು ತಿಳಿಸಿದರು.
ಸಂಘ ಸಂಸ್ಥೆಗಳು ಆಯ್ಕೆ ಮಾಡುವ ಸಿಎ ನಿವೇಶನಗಳ ಉದ್ದೇಶ ಸಂಸ್ಥೆಯ ಧ್ಯೇಯೋದ್ದೇಶದ ಭಾಗವಾಗಿರಬೇಕು. ಸಂಘ ಸಂಸ್ಥೆಗಳು ಗರಿಷ್ಠ ಮೂರು ನಿವೇಶನಗಳಿಗೆ ಆದ್ಯತೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಮುಡಾ ಕೇಳಿರುವ ಅಗತ್ಯ ದಾಖಲಾತಿಗಳನ್ನು ಅರ್ಜಿ ಜೊತೆ ಸಲ್ಲಿಸಬೇಕು. ಈ ಹಿಂದೆ ನಾಗರಿಕ ಸೌಕರ್ಯ ನಿವೇಶನ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಹೊಸ ಮಂಜೂರಾತಿಗೆ ಪರಿಗಣಿಸಲಾಗುವುದಿಲ್ಲ. ಸಂಸ್ಥೆಯ ಆರ್ಥಿಕ ಸ್ಥಿತಿ, ಸಂಸ್ಥೆಯ ಚಟುವಟಿಕೆಗಳು, ಸಾರ್ವಜನಿಕರ ಹಿತಕಾಗಿ ಸಲ್ಲಿಸಿರುವ ಸೇವೆಯನ್ನು ಮಂಜೂರಾತಿ ಸಮಯದಲ್ಲಿ ಉಪಸಮಿತಿ ಪರಿಶೀಲನೆ ನಡೆಸಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ, ವಿಶೇಷ ಚೇತನ ಶ್ರೇಯೋಭಿವೃದ್ಧಿ ಸೇವೆಯ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದು. ಜೊತೆಗೆ ರಿಯಾಯಿತಿ ನೀಡಲಾಗುವುದು. ಮಂಜೂರಾತಿ ಪತ್ರ ಪಡೆದ ನಂತರ ನಿವೇಶನ ಪಡೆದ ಸಂಸ್ಥೆ ಮೂಡಾದ ಷರತ್ತುಗಳನ್ನು ಪಾಲಿಸಬೇಕು ಎಂದು ಹೆಚ್.ವಿ ರಾಜೀವ್ ಹೇಳಿದರು.
ಗುಂಪು ವಸತಿ ಯೋಜನೆಗೆ ಸಮೀಕ್ಷೆ: ವಸತಿ ರಹಿತರು ಪಾಲ್ಗೊಳ್ಳುವಂತೆ ಮನವಿ.
ಗುಂಪು ವಸತಿ ಯೋಜನೆಗೆ ಸಮೀಕ್ಷೆ ಆರಂಭಿಸಲಾಗಿದೆ. ವಸತಿ ರಹಿತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ. ಸಾರ್ವಜನಿಕರು ಸಮೀಕ್ಷೆಯಲ್ಲಿ ನೀಡುವ ಮಾಹಿತಿ ಆಧರಿಸಿ ಎರಡನೇ ಹಂತದ ಯೋಜನೆ ರೂಪಿಸಲಾಗುವುದು. ಕಡಿಮೆ ಮತ್ತು ಮಧ್ಯಮ ವರ್ಗದ ಜನರು ವಾಸಿಸುವ ಬಡಾವಣೆಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು. UDA ಆಪ್ ಡೌನ್ಲೋಡ್ ಮಾಡಿಕೊಂಡು ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಿರಿ ಎಂದು ಮೈಸೂರು ಜನತೆಗೆ ಮೂಡಾ ಅಧ್ಯಕ್ಷ ಎಚ್.ವಿ.ರಾಜೀವ್ ಮನವಿ ಮಾಡಿದರು.
Key words: Decision -allocation – 300- CA site-MUDA President -HV Rajeev.