ಮೈಸೂರು,ಸೆಪ್ಟಂಬರ್.1,2021(www.justkannada.in): ತಮಿಳುನಾಡಿಗೆ 30.6 ಟಿಎಂಸಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆ ನೀಡಿದ್ದು,ಈ ಮೂಲಕ ಆತಂಕಕಾರಿ ತೀರ್ಮಾನ ಕೈಗೊಂಡಿದೆ. ನೆನ್ನೆ ನಡೆದ ಸಭೆಯ ಪ್ರೊಸಿಡಿಂಗ್ಸ್ ನನ್ನ ಬಳಿ ಇದೆ. ನಿನ್ನೆ ನಡೆದ ಸಭೆ ಕುರಿತು ರಾಜ್ಯ ಸರ್ಕಾರ ತಕ್ಷಣ ಸಭೆ ಕರೆದು ಚರ್ಚೆ ಮಾಡಬೇಕು. ಮುಂದೆ ಆಗಬೇಕಾದ ಅನಾಹುತ ತಪ್ಪಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಇಲ್ಲಿಯವರೆಗೆ 280 ಟಿಎಂಸಿ ನೀರು ಸಂಗ್ರಹ ಆಗಿರಬೇಕಿತ್ತು. ಶೇ ,25 ರಷ್ಟು ನೀರಿನ ಕೊರತೆ ಆಗಿದೆ. ನಾಲ್ಕು ಡ್ಯಾಂಗಳಲ್ಲಿ ಇದೆ. ಕೆಆರ್ ಎಸ್ , ಕಬಿನಿ ಹಾರಂಗಿ ಹೇಮಾವತಿ ಜಲಾಶಗಳಲ್ಲಿ 74 ಟಿಎಂಸಿ ನೀರು ಮಾತ್ರ ಇದೆ. ಇಂತಹ ಸಂದರ್ಭದಲ್ಲಿ ಆತಂಕಕಾರಿ ತೀರ್ಮಾನವನ್ನ ಸಭೆ ತೆಗೆದುಕೊಂಡಿದೆ. ಜೂನ್ ಜುಲೈ ಆಗಸ್ಟ್ ತಿಂಗಳ ಬಾಕಿ 30 ಟಿಎಂಸಿ ಬಾಕಿ ನೀರನ್ನು ಬಿಡಬೇಕು ಎಂದು ಹೇಳಿದೆ. ಬಾಕಿ 30 +37 67 ಟಿ ಎಂಸಿ ನೀರನ್ನ ಬಿಡಬೇಕು ಎಂಬ ತೀರ್ಮಾನ ಆಗಿದೆ. ಕೆ ಆರ್ ಎಸ್ ನೀರು ಬಿಡಲು ಸರ್ಕಾರದ ಅನುಮತಿ ಬೇಕಿಲ್ಲ. ಇವು ಕಾವೇರಿ ನೀರು ನಿರ್ವಹಣಾ ಮಂಡಳಿಯ ಕೈಯಲ್ಲಿದೆ. ಸರ್ಕಾರ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.
ನೀರಾವರಿ ಮಂತ್ರಿಗಳೆ ಎಲ್ಲಿದ್ದೀರಾ..? ಕಾರಾಜೊಳ ಅವರೇ ವಸೂಲಿಯಲ್ಲಿ ಬಿಝಿಯಾಗಿದ್ದೀರಾ..?
ರಾತ್ರಿಯಿಂದಾನೆ 9 ಸಾವಿರ ಕ್ಯೂಸೆಕ್ ನೀರು ಹೊರಗೆ ಹೊಗ್ತಾ ಇದೆ. ಬೆಂಗಳೂರು ಒಂದಕ್ಕೆ 20 ಟಿಎಂಸಿ ನೀರು ಬೇಕು. ಒಟ್ಟು ಕುಡಿಯಲು 40 ಟಿಎಂಸಿ ನೀರು ಬೇಕು. ಹೇಗೆ ನೀರು ಕೊಡ್ತೀರಾ..? ನೀರಾವರಿ ಮಂತ್ರಿಗಳೆ ಎಲ್ಲಿದ್ದೀರಾ..? ಮಿಸ್ಟರ್ ಕಾರಾಜೋಳ ಎಲ್ಲಿದ್ದೀರಿ.? ಕಾರಾಜೊಳ ವಸೂಲಿಯಲ್ಲಿ ಬಿಝಿಯಾಗಿದ್ದೀರಾ…? ಸಿಎಂ ಅವರೇ ಇದು ಸೀರಿಯಸ್ ವಿಷಯ ಅಲ್ವಾ.? ಸುಪ್ರೀಂ ಕೋರ್ಟ್ ನಿರ್ದೇಶನ ಬಹಳ ಸ್ಪಷ್ಟವಾಗಿದೆ. ಯಾಕೆ ನೀವು ವಾದ ಮಾಡುತ್ತಿಲ್ಲ ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದ್ದಾರೆ.
177.52 ಟಿ ಎಂಸಿ ನೀರು ಬಿಡಬೇಕು ಎಂಬ ಆದೇಶ ಇದೆ. ಅದು ಸಾಮಾನ್ಯ ವರ್ಷದಲ್ಲಿ ಮಾತ್ರ. ನಾವು ಬಿಡುಗಡೆ ಮಾಡಬೇಕಿರುವುದು. ಈಗ ಮಳೆ ಕೊರತೆ ಆಗಿದೆ. 770 ಟಿಎಂಸಿ ನೀರು ಕರ್ನಾಟಕ ಇರೋದು. ಅದರಲ್ಲಿ 177 ಟಿಎಂಸಿ ನೀರು ಬಿಡಬೇಕು. ಈ ಬಗ್ಗೆ ಸರ್ಕಾರ ಯಾಕೆ ಮನವರಿಕೆ ಮಾಡುಕೊಡುತ್ತಿಲ್ಲ. ರಾಜ್ಯ ಸರ್ಕಾರ ಒಂದು ರೆಜುಲೇಷನ್ ಮಾಡಿ ಕೇಂದ್ರಕ್ಕೆ ಕಳುಹಿಸಬೇಕು. ಕೇಂದ್ರ ಸರ್ಕಾರ ಇಬ್ಬಂದಿತನ ನಿಲ್ಲಿಸಬೇಕು ಎಂದು ಲಕ್ಷ್ಮಣ್ ಕಿಡಿಕಾರಿದರು.
ಡಬಲ್ ಸ್ಟ್ಯಾಂಡರ್ಡ್ ನೀತಿಯನ್ನು ಕೇಂದ್ರ ಸರ್ಕಾರ ಬಿಡಬೇಕು.
ಮೇಕೆದಾಟು ಯೋಜನೆ ತಡೆಯುವಂತಹ ಕೆಲಸವನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಕೇಂದ್ರ ಸರ್ಕಾರ ಇಬ್ಬಂದಿ ನೀತಿ ಬಿಡಬೇಕು. ಮೇಕೆದಾಟು ಯೋಜನೆಗೆ ಅನುಮತಿ ಯಾಕೆ ಕೊಡ್ತಾ ಇಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಈ ಯೋಜನೆ ರೂಪುಗೊಂಡಿದ್ದು. ಈಗ ಅಣ್ಣಮಲೈ ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದೀರಾ..? ಡಬಲ್ ಸ್ಟ್ಯಾಂಡರ್ಡ್ ನೀತಿಯನ್ನು ಕೇಂದ್ರ ಸರ್ಕಾರ ಬಿಡಬೇಕು. ಮೇಕೆದಾಟು ಯೋಜನೆ ಅವಕಾಶ ನೀಡಬೇಕು ಎಂದು ಎಂ. ಲಕ್ಷ್ಮಣ್ ಒತ್ತಾಯ ಮಾಡಿದರು.
Key words: decision – Cauvery -Water Management –Board- state government – meeting- immediately-KPCC spokesperson- M Laxman