ಮೈಸೂರು, ಆಗಸ್ಟ್, 28,2023(www.justkannada.in): ರಾಜ್ಯದಲ್ಲಿ ಬರದ ಛಾಯೆಯಿರುವ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯ ಸಭೆ ಇಂದು ಅಥವಾ ನಾಳೆ ನಡೆಯಲಿದ್ದು, ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಿ, ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಮೈಸೂರಿನ ಸರ್ಕಾರಿ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಮೋಡ ಬಿತ್ತನೆ ಇಂದಿನವರೆಗೂ ಎಲ್ಲಿಯೂ ಯಶಸ್ವಿಯಾಗಿಲ್ಲ. ಬರಗಾಲ ಘೋಷಣೆಯಾದ ಮೇಲೆ ಕೇಂದ್ರ ಸರ್ಕಾರದವರಿಗೆ ತಿಳಿಸಲಾಗುವುದು. ಕೇಂದ್ರ ಸರ್ಕಾರದವರು ಪರಿಶೀಲಿಸಿದ ನಂತರ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳ ಪ್ರಕಾರ ನೆರವು ನೀಡುತ್ತಾರೆ ಎಂದರು. ಬರಗಾಲ ಎಂದು ಘೋಷಣೆಯಾದ ನಂತರ ಆ ತಾಲ್ಲೂಕುಗಳಲ್ಲಿ ಬರ ಪರಿಹಾರವಾಗಿ ಜನರಿಗೆ ಕೆಲಸ, ಮುಂತಾದ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದರು.
ಮೂರು ದಿನಗಳ ಮೈಸೂರು ಜಿಲ್ಲಾ ಪ್ರವಾಸ
ಮೂರು ದಿನಗಳ ಕಾಲ ಮೈಸೂರು ಪ್ರವಾಸ ಕೈಗೊಂಡಿದ್ದು, ಇಂದು ಕೆಡಿಪಿ ಸಭೆ ನಡೆಸಿದ್ದೇನೆ. ನಾಳೆ ಸುತ್ತೂರು ಮಠ ಹಾಗೂ ಸಿದ್ದಲಿಂಗಪುರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಕೆ.ಆರ್.ಆಸ್ಪತ್ರೆಯಲ್ಲಿ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡುವ ಬರ್ನ್ಸ್ ವಾರ್ಡ್ ಉದ್ಘಾಟನೆ ಇದೆ. ಆಗಸ್ಟ್ 30 ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು. ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ 3 ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ನಾಲ್ಕನೇ ಗ್ಯಾರಂಟಿಯನ್ನು ಜಾರಿ ಮಾಡಲಿದ್ದೇವೆ ಎಂದರು. ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಆಗಮಿಸಲಿದ್ದಾರೆ. ಖರ್ಗೆಯವರು ಉದ್ಘಾಟಿಸಿ, ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ನಾಲ್ಕು ಜಿಲ್ಲೆಗಳು ಸೇರಿ ಕಾರ್ಯಕ್ರಮ ಆಯೋಜಿಸಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಗೃಹಲಕ್ಷ್ಮೀ ದೇಶದಲ್ಲಿಯೇ ದೊಡ್ಡ ಕಾರ್ಯಕ್ರಮ
ದೇಶದಲ್ಲಿಯೇ ಇದು ದೊಡ್ಡ ಕಾರ್ಯಕ್ರಮ. ವರ್ಷದಲ್ಲಿ ಸುಮಾರು 32 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಈ ವರ್ಷ ಸುಮಾರು 18 ಸಾವಿರ ಕೋಟಿ ರೂ. ಗಳು ವೆಚ್ಚವಾಗಲಿದೆ. 1.33 ಕೋಟಿ ಲಕ್ಷ ಕುಟುಂಬಗಳ ಯಜಮಾನಿಗೆ 2000 ರೂ. ನೀಡಲಾಗುತ್ತಿದೆ. ಒಂದು ತಿಂಗಳಿಗೆ 4ರಿಂದ 5 ಸಾವಿರ ರೂ.ಗಳು ಒಂದು ಕುಟುಂಬಕ್ಕೆ ದೊರೆಯಲಿದೆ. ಇದರಿಂದ ಅವರ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಅವರ ಕೈಯಲ್ಲಿ ದುಡ್ಡು ಇರುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಎಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಿರುತ್ತದೆಯೋ ಅಲ್ಲಿ ಜಿಡಿಪಿ ಕೂಡ ಬೆಳವಣಿಗೆ ಆಗುತ್ತದೆ ವರ್ಷಕ್ಕೆ ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದರು.
ಬೆಳಗಾವಿಯಿಂದ ಕಾರ್ಯಕ್ರಮ ಮೈಸೂರಿಗೆ ಸ್ಥಳಾಂತರವಾಗಿರುವ ಪ್ರತಿಕ್ರಿಯೆ ನೀಡಿ ಎಲ್ಲಾ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಜಾರಿಯಾಗಲಿದೆ. ಬೆಳಗಾವಿಗೆ ಬದಲಾಗಿ ಮೈಸೂರಿನಲ್ಲಿ ಏರ್ಪಡಾಗಿದೆ ಎಂದು ಸಿದ್ಧರಾಮಯ್ಯ ತಿಳಿಸಿದರು.
Key words: Decision – drought -declaration – Cabinet – meeting-Siddaramaiah
ENGLISH SUMMARY..
Drought declaration: decision after cabinet sub-committee meeting
No example of cloud seeding being successful : Chief Minister Siddaramaiah
Mysore, August 28: Chief Minister Siddaramaiah said that the meeting of the cabinet sub-committee will be held shortly and a decision regarding drought declaration will be taken. The cabinet will then decide on the same.
He was speaking to the media at Sarkari Bhavan at Mysore today.
There is no report of cloud seeding being successful anywhere. The central government will be informed after the declaration of drought. He said that the central government will provide assistance as per NDRF norms after verification. He said that after the declaration of drought, programs such as work for the people will be started in drought affected taluks.
Three day tour
The CM informed that he is on a three day tour to Mysuru.
He said that he will participate in the programs organized at Sattur Mutt and Siddalingapur, tomorrow.
More than one lakh people are expected to participate
The CM said that he would be inaugurating the Burns Ward at KR Hospital. Grilahakshmi scheme will be launched on August 30. He said that as announced before the election, three guarantees have been implemented and the fourth guarantee will be implemented. More than one lakh people are expected to attend the launch of Grihalakshmi. Rajya Sabha Opposition Leader Mallikarjuna Kharge, MP Rahul Gandhi will be attending the programme, he said. Kharge will inaugurate and he would chair the programme.
Four districts Mysore, Mandya, Chamarajanagar, Kodagu have been included for the launch he said.
Grilahakshmi is the biggest program in the country About 32,000 crores are being spent in a year for Grihalakshmi programme. 18 thousand crores will be spent this year. Rs 2000 will be given to the women who are heads of the households. It will benefit 1.33 Crore Lakh families in the state, he said. A family will get 4-5 thousand rupees per month. This increases their purchasing power. Financial activities will increase as they have money in their hands. He said that where the purchasing power is high, the GDP will also grow and employment will be created.
In response to the shifting the program from Belagavi to Mysore, the program will be implemented in all the districts. He said that arrangements have been made in Mysore instead of Belgavi.