ತುಮಕೂರು,ಜೂನ್,14,2023(www.justkannada.in): ಪಾವಗಡ ತಾಲೂಕಿನ ತಿರುಮಣಿಯಲ್ಲಿನ ಸೋಲಾರ್ ಪಾರ್ಕ್ ಅನ್ನು 10 ಸಾವಿರ ಎಕರೆಗೆ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಸೋಲಾರ್ಪಾರ್ಕ್ ಬಳಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನಾನು ಮತ್ತು ಇಂಧನ ಸಚಿವ ಕೆಜೆ ಜಾರ್ಜ್ ಅವರು ಹೆಲಿಕಾಪ್ಟರ್ ಮೂಲಕ ಸೋಲಾರ್ ಪಾರ್ಕ್ ವೀಕ್ಷಣೆ ಮಾಡಿದ್ದೇವೆ. ಸೋಲಾರ್ ಪಾರ್ಕ್ಗೆ ಭೂಮಿ ನೀಡಿದ ರೈತರಿಗೆ ಸಮಾಧಾನವಿದೆ. ಅಗ್ರಿಮೆಂಟ್ನಂತೆ ಜಮೀನು ನೀಡಿದ ರೈತರ ಖಾತೆಗೆ ಹಣ ಹೋಗುತ್ತಿದೆ, ಪ್ರತಿ ವರ್ಷ 25 ಸಾವಿರ ಬಾಡಿಗೆ ಪಡೆಯುತ್ತಿದ್ದಾರೆ. ಎಂದು ತಿಳಿಸಿದರು.
ಹಿಂದಿನ ನಿಯಮದಂತೆ ರೈತರು ಮುಂದೆ ಬಂದರೆ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುತ್ತೇವೆ. ನಮ್ಮ ಸೋಲಾರ್ ಪಾರ್ಕ್ ವಿಶ್ವದಲ್ಲೇ ನಂಬರ್ 1 ಇತ್ತು, ಈಗ ರಾಜಸ್ಥಾನದ ನಡುವೆ ಪೈಪೋಟಿಯಿದೆ ಎಂದರು.
ಹಾಗೆಯೇ ರಾಜ್ಯದ ಉದ್ದಗಲಕ್ಕೂ ಕುಸುಮ ಯೋಜನೆ ಮಾಡುತ್ತಿದ್ದೇವೆ. ರೈತರ ಪಂಪ್ ಸೆಟ್ಗೆ ಅವರೇ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
Key words: Decision –expand-Pavagada-Solar Park-DCM-DK Shivakumar.